ಬೇಕಾಗುವ ಸಾಮಾಗ್ರಿಗಳು: ಕಡಲೇ ಹಿಟ್ಟು- 3 ಕಪ್, ಸಕ್ಕರೆ- 3 ಕಪ್, ತುಪ್ಪ- ಸ್ವಲ್ಪ, ದ್ರಾಕ್ಷಿ, ಗೋಡಂಬಿ- ಸ್ವಲ್ಪ, ಲವಂಗ- 8, ಕರಿಯಲು ಎಣ್ಣೆ
ಮಾಡುವ ವಿಧಾನ: ಮೊದಲಿಗೆ ಕಡಲೇಹಿಟ್ಟನ್ನು ಜರಡಿ ಹಿಡಿಯಿರಿ. ನಂತರ ಇದಕ್ಕೆ ಸ್ವಲ್ಪ ಸ್ವಲ್ಪ ನೀರು ಹಾಕಿ ಈ ಹಿಟ್ಟನ್ನು ಕಲಸಿಕೊಳ್ಳಬೇಕು. ನಂತರ ಕರಿಯಲು ಎಣ್ಣೆ ಬಿಸಿಯಾದ ಕೂಡಲೇ ಬೂಂದಿ ತಟ್ಟೆಯಲ್ಲಿ ಹಿಟ್ಟನ್ನು ಹಾಕಿ ಎಣ್ಣೆಗೆ ಬಿಡಿ. ನೊರೆ ನಿಂತ ಕೂಡಲೇ ಎಣ್ಣೆಯಿಂದ ಬೂಂದಿಯನ್ನು ಎತ್ತಿಡಿ. ನಂತರ ತುಪ್ಪದಲ್ಲಿ ಗೋಡಂಬಿ, ದ್ರಾಕ್ಷಿ, ಲವಂಗ ಹುರಿದಿಕೊಂಡು ಇದನ್ನು ಬೂಂದಿಗೆ ಹಾಕಿ.
ನಂತರ ಮೂರು ಕಪ್ ಸಕ್ಕರೆಯನ್ನು ಪಾತ್ರೆಗೆ ಹಾಕಿ ಇದಕ್ಕೆ ಒಂದು ಕಪ್ ನಷ್ಟು ನೀರು ಹಾಕಿ ಪಾಕ ಬರಲು ಸ್ಟೌನಲ್ಲಿ ಇಡಬೇಕು. ಒಂದೆಳೆ ಪಾಕ ಬಂದಾಗ ಅರ್ಧ ಪಾಕವನ್ನು ಬೂಂದಿಗೆ ಹಾಕಿ, ಮಿಕ್ಸ್ ಮಾಡಿ. ಉಳಿದ ಅರ್ಧ ಪಾಕವನ್ನು ಮತ್ತೆ ಕುದಿಸಿ. ಎರಡನೇ ಪಾಕ ಅಂಟು ಬಂದಾಗ ಮತ್ತೆ ಬೂಂದಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು. ಪಾಕ ಹೀರಿಕೊಳ್ಳುವ ತನಕ ಆಗಾಗ ಮಿಕ್ಸ್ ಮಾಡಬೇಕು. ಸ್ವಲ್ಪ ತಣಿದ ಕೂಡಲೇ ಉಂಡೆ ಕಟ್ಟಿಕೊಂಡರೆ ಸವಿಯಲು ಬೂಂದಿ ಲಡ್ಡು ರೆಡಿ.