alex Certify ಸರ್ಕಾರ ನೀಡಿದ 500 ರೂ. ಖಾತೆಗೆ ಬಂದಿದ್ಯಾ…? ಹೀಗೆ ಪತ್ತೆ ಮಾಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸರ್ಕಾರ ನೀಡಿದ 500 ರೂ. ಖಾತೆಗೆ ಬಂದಿದ್ಯಾ…? ಹೀಗೆ ಪತ್ತೆ ಮಾಡಿ

ಲಾಕ್‌ಡೌನ್ ಮಧ್ಯೆ ಬಡವರಿಗೆ ಪಡಿತರ ಮತ್ತು ಆರ್ಥಿಕ ನೆರವು ನೀಡುವ ಯೋಜನೆ ಜಾರಿಯಲ್ಲಿದೆ.  ಪ್ರಧಾನ್ ಮಂತ್ರಿ ಗರಿಬ್ ಕಲ್ಯಾಣ್ ಪ್ಯಾಕೇಜ್ ಅಡಿಯಲ್ಲಿ  ಪಿಎಂಜೆಡಿವೈನ ಮಹಿಳಾ ಖಾತೆದಾರರಿಗೆ ಜೂನ್ ತಿಂಗಳಲ್ಲಿ 500 ರೂಪಾಯಿಗಳನ್ನು ಬ್ಯಾಂಕ್ ಖಾತೆಗೆ ಹಾಕಲಾಗ್ತಿದೆ.  ಭಾರತೀಯ ಬ್ಯಾಂಕ್ಸ್ ಅಸೋಸಿಯೇಷನ್ ​​ಈ ಮಾಹಿತಿಯನ್ನು ಟ್ವೀಟ್ ಮಾಡಿದೆ.

ನಿಮ್ಮ ಹಣವು ಸಂಪೂರ್ಣವಾಗಿ ಸುರಕ್ಷಿತವಾಗಿದೆ ಎಂದು ಖಾತೆದಾರರಿಗೆ ಬ್ಯಾಂಕ್ಸ್ ಅಸೋಸಿಯೇಷನ್ ತಿಳಿಸಿದೆ. ಬ್ಯಾಂಕುಗಳಲ್ಲಿನ ದಟ್ಟಣೆಯನ್ನು ತಪ್ಪಿಸಲು ವೇಳಾಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಅದ್ರಂತೆ ಬ್ಯಾಂಕ್ ಗೆ ಬಂದು ಜನರು ಹಣ ಪಡೆಯಬಹುದು.

5 ಜೂನ್ ರಂದು ಖಾತೆಯ ಕೊನೆಯ ಸಂಖ್ಯೆ 0 ಅಥವಾ 1 ಆಗಿದ್ದವರ ಖಾತೆಗೆ ಹಣ ಹೋಗಲಿದೆ. ಜೂನ್ 6ರಂದು ಖಾತೆ  ಕೊನೆಯ ಸಂಖ್ಯೆ 2 ಮತ್ತು 3 ಆಗಿದ್ದವರಿಗೆ, ಜೂನ್ 8 ರಂದು ಕೊನೆಯ ಸಂಖ್ಯೆ 4 ಅಥವಾ 5 ಆಗಿದ್ದವರಿಗೆ, ಜೂನ್ 9ರಂದು  ಕೊನೆಯ ಸಂಖ್ಯೆ 6 ಅಥವಾ 7 ಆಗಿದ್ದವರಿಗೆ ಮತ್ತು ಜೂನ್ 10ರಂದು ಕೊನೆಯ ಸಂಖ್ಯೆ 8 ಅಥವಾ 9 ಆಗಿದ್ದವರ ಖಾತೆಗೆ ಹಣ ಹೋಗಲಿದೆ. ಇದ್ರ ಆಧಾರದ ಮೇಲೆ ಆಯಾ ಖಾತೆದಾರರು ಬ್ಯಾಂಕ್ ಗೆ ಬಂದು ಹಣ ಪಡೆಯಬಹುದಾಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...