alex Certify ಶಾಶ್ವತವಾಗಿ ಮನೆಯಿಂದಲೇ ಕೆಲಸ ಮಾಡಲು ಅವಕಾಶ ನೀಡಿದೆ ಈ ಕಂಪನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಶ್ವತವಾಗಿ ಮನೆಯಿಂದಲೇ ಕೆಲಸ ಮಾಡಲು ಅವಕಾಶ ನೀಡಿದೆ ಈ ಕಂಪನಿ

ಲಾಕ್‌ಡೌನ್‌ನಿಂದಾಗಿ ಅನೇಕ ಐಟಿ – ಬಿಟಿ ಕಂಪನಿಗಳು ವರ್ಕ್ ಫ್ರಂ ಹೋಂಗೆ ಅವಕಾಶ ನೀಡಿವೆ. ಇನ್ನು ಇತರೆ ಸಣ್ಣಪುಟ್ಟ ಕಂಪನಿಗಳು ಸಹ ಮನೆಯಿಂದಲೇ ಕೆಲಸ ಮಾಡಿ ಎಂದು ತಮ್ಮ ತಮ್ಮ ನೌಕರರಿಗೆ ಸೂಚನೆ ನೀಡಿವೆ.

ಇದೀಗ ಇನ್ಮುಂದೆ ಶಾಶ್ವತವಾಗಿ ಮನೆಯಿಂದಲೇ ಕಾರ್ಯನಿರ್ವಹಿಸಬಹುದು ಎಂದು ಟ್ವಿಟ್ಟರ್ ಸಿಬ್ಬಂದಿಗಳಿಗೆ ಟ್ವಿಟ್ವರ್ ವಕ್ತಾರ ಹೇಳಿದ್ದಾರೆ. ಹೌದು, ಮನೆಯಿಂದಲೇ ಕೆಲಸ ನಿರ್ವಹಿಸುವ ಅವಕಾಶ ಇರುವುದರಿಂದ ಟ್ವಿಟ್ಟರ್ ಸಿಬ್ಬಂದಿಗಳು ಕಚೇರಿಗೆ ಬರುವ ಅವಶ್ಯಕತೆ ಇಲ್ಲ ಎಂದು ಅವರು ತಿಳಿಸಿದ್ದಾರೆ. ಆದರೆ ಇದು ಸಿಬ್ಬಂದಿಗಳ ಇಚ್ಛೆಗೆ ಬಿಟ್ಟಿದ್ದು ಎಂದೂ ಹೇಳಲಾಗಿದೆ.

ಇನ್ನು ಈ ವರ್ಷದ ಅಂತ್ಯದವರೆಗೂ ಫೇಸ್‌ಬುಕ್ ಹಾಗೂ ಗೂಗಲ್ ಕಂಪನಿಯ ಅನೇಕ ಮಂದಿ ನೌಕರರು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಟ್ವಿಟ್ಟರ್ ಕಂಪನಿಯ ಸಿಬ್ಬಂದಿಗಳು ಕೂಡ ಮನೆಯಿಂದಲೇ ವರ್ಕ್ ಮಾಡಬಹುದು ಎಂದು ತಿಳಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...