alex Certify ಶಾಕಿಂಗ್: ದಾಖಲೆ ಮಟ್ಟದಲ್ಲಿ ಏರಿಕೆ ಕಂಡ ಚಿನ್ನದ ಬೆಲೆ – 50 ಸಾವಿರ ರೂ. ದಾಟಿದ ಹಳದಿ ಲೋಹ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಕಿಂಗ್: ದಾಖಲೆ ಮಟ್ಟದಲ್ಲಿ ಏರಿಕೆ ಕಂಡ ಚಿನ್ನದ ಬೆಲೆ – 50 ಸಾವಿರ ರೂ. ದಾಟಿದ ಹಳದಿ ಲೋಹ

ಚಿನ್ನದ ಬೆಲೆ ಐತಿಹಾಸಿಕ ಗರಿಷ್ಠ ಮಟ್ಟವನ್ನು ತಲುಪಿದೆ. ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 50,000 ರೂಪಾಯಿಯಾಗಿದೆ.

ಆರಂಭಿಕ ವ್ಯವಹಾರದಲ್ಲಿ  ಚಿನ್ನದ ಬೆಲೆ ಶೇಕಡಾ 0.88 ರಷ್ಟು ಏರಿಕೆಯಾಗಿತ್ತು. 10 ಗ್ರಾಂ ಚಿನ್ನದ ಬೆಲೆ 49,962 ರೂಪಾಯಿಯಾಗಿತ್ತು. ಗೋಲ್ಡ್ ಮಿನಿ ಕೂಡ ಭಾರಿ ಏರಿಕೆ ಕಂಡಿದೆ.ಈಗ ಚಿನ್ನದ ಬೆಲೆ ಶೇಕಡಾ 1ರಷ್ಟು ಏರಿಕೆ ಕಂಡಿದ್ದು, ಬಂಗಾರದ ಬೆಲೆ 10 ಗ್ರಾಂಗೆ 50,020 ರೂಪಾಯಿಯಾಗಿದೆ.

ಬೆಳ್ಳಿಯ ಬೆಲೆಯೂ ದಾಖಲೆಯ ಗರಿಷ್ಠ ಮಟ್ಟವನ್ನು ಕಾಣುತ್ತಿದೆ ಮತ್ತು ಬೆಳ್ಳಿ ಐತಿಹಾಸಿಕ ವೇಗದಲ್ಲಿ ವಹಿವಾಟು ನಡೆಸುತ್ತಿದೆ. ಬೆಳ್ಳಿ ಬೆಲೆ ಕೆ.ಜಿ. ಗೆ 60550 ರೂಪಾಯಿಯಲ್ಲಿ ವಹಿವಾಟು ನಡೆಸುತ್ತಿದೆ. ಹಿಂದಿನ ವಹಿವಾಟಿನಲ್ಲಿ ಕೆ.ಜಿ. ಬೆಳ್ಳಿ ಬೆಲೆ 57,342 ರೂಪಾಯಿಯಾಗಿತ್ತು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...