ಕೊರೊನಾ ವೈರಸ್ ಪ್ರಕರಣಗಳ ಹೆಚ್ಚಾಗ್ತಿರುವ ಹಿನ್ನಲೆಯಲ್ಲಿ ವಿಮಾ ನಿಯಂತ್ರಕ (ಐಆರ್‌ಡಿಎ) ಖುಷಿ ಸುದ್ದಿಯೊಂದನ್ನು ನೀಡಿದೆ. ಜೀವ ವಿಮಾ ಕಂಪನಿಗಳಿಗೆ ಎಲೆಕ್ಟ್ರಾನಿಕ್ ಪಾಲಿಸಿಗಳನ್ನು ವಿದ್ಯುನ್ಮಾನವಾಗಿ ವಿತರಿಸಲು ಅವಕಾಶ ನೀಡಿದೆ. ಆದ್ರೆ ಈ ವಿನಾಯಿತಿಯನ್ನು ಷರತ್ತುಬದ್ಧವಾಗಿ ನೀಡಬೇಕು.
ವಿಮೆ ಖರೀದಿ ಇನ್ಮುಂದೆ ಸುಲಭವಾಗಲಿದೆ. ಇದಕ್ಕಾಗಿ ನೀವು ತುಂಬಾ ಸಮಯ ಕಾಯಬೇಕಾಗಿಲ್ಲ. ವಿವಿಧ ವಿಮಾ ಕಂಪನಿಗಳು, ಗ್ರಾಹಕರಿಗೆ ಪಾಲಿಸಿಗಳನ್ನು ಕಳುಹಿಸುವುದರಿಂದ ಎದುರಾಗುತ್ತಿರುವ ಸಮಸ್ಯೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ನಂತರ ಐಆರ್ಡಿಎ ಈ ನಿರ್ಧಾರ ಕೈಗೊಂಡಿದೆ. ಇ-ಪಾಲಿಸಿಯನ್ನು ಪರಿಶೀಲಿಸಿ, ಅರ್ಥ ಮಾಡಿಕೊಳ್ಳಲು ಕಂಪನಿಗಳು ಗ್ರಾಹಕರಿಗೆ 30 ದಿನಗಳನ್ನು ನೀಡಬೇಕಾಗುತ್ತವೆ.
ಇ-ಪಾಲಿಸಿ ನೀಡುವ ಮೊದಲು ಗ್ರಾಹಕರ ಒಪ್ಪಿಗೆ ಪಡೆಯಬೇಕು. ಗ್ರಾಹಕರು ದಾಖಲೆ ಕೇಳಿದ್ರೆ ಅದನ್ನು ಕಂಪನಿ ನೀಡಬೇಕಾಗುತ್ತದೆ. ವಿಮೆ ಪಡೆಯುವ ಪ್ರಕ್ರಿಯೆ ಇನ್ಮುಂದೆ ಮೊದಲಿಗಿಂತ ಬೇಗ ಆಗಲಿದೆ.