alex Certify ವಿಮೆ ಪಾಲಿಸಿ ಖರೀದಿ ಮಾಡುವವರಿಗೊಂದು ಖುಷಿ ಸುದ್ದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಮೆ ಪಾಲಿಸಿ ಖರೀದಿ ಮಾಡುವವರಿಗೊಂದು ಖುಷಿ ಸುದ್ದಿ

ಕೊರೊನಾ ವೈರಸ್ ಪ್ರಕರಣಗಳ ಹೆಚ್ಚಾಗ್ತಿರುವ ಹಿನ್ನಲೆಯಲ್ಲಿ ವಿಮಾ ನಿಯಂತ್ರಕ (ಐಆರ್‌ಡಿಎ) ಖುಷಿ ಸುದ್ದಿಯೊಂದನ್ನು ನೀಡಿದೆ. ಜೀವ ವಿಮಾ ಕಂಪನಿಗಳಿಗೆ ಎಲೆಕ್ಟ್ರಾನಿಕ್ ಪಾಲಿಸಿಗಳನ್ನು ವಿದ್ಯುನ್ಮಾನವಾಗಿ ವಿತರಿಸಲು ಅವಕಾಶ ನೀಡಿದೆ. ಆದ್ರೆ ಈ ವಿನಾಯಿತಿಯನ್ನು ಷರತ್ತುಬದ್ಧವಾಗಿ ನೀಡಬೇಕು.

ವಿಮೆ ಖರೀದಿ ಇನ್ಮುಂದೆ ಸುಲಭವಾಗಲಿದೆ. ಇದಕ್ಕಾಗಿ ನೀವು ತುಂಬಾ ಸಮಯ ಕಾಯಬೇಕಾಗಿಲ್ಲ. ವಿವಿಧ ವಿಮಾ ಕಂಪನಿಗಳು, ಗ್ರಾಹಕರಿಗೆ ಪಾಲಿಸಿಗಳನ್ನು ಕಳುಹಿಸುವುದರಿಂದ ಎದುರಾಗುತ್ತಿರುವ ಸಮಸ್ಯೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ನಂತರ ಐಆರ್ಡಿಎ ಈ ನಿರ್ಧಾರ ಕೈಗೊಂಡಿದೆ. ಇ-ಪಾಲಿಸಿಯನ್ನು ಪರಿಶೀಲಿಸಿ, ಅರ್ಥ ಮಾಡಿಕೊಳ್ಳಲು ಕಂಪನಿಗಳು ಗ್ರಾಹಕರಿಗೆ 30 ದಿನಗಳನ್ನು ನೀಡಬೇಕಾಗುತ್ತವೆ.

ಇ-ಪಾಲಿಸಿ ನೀಡುವ ಮೊದಲು ಗ್ರಾಹಕರ ಒಪ್ಪಿಗೆ ಪಡೆಯಬೇಕು. ಗ್ರಾಹಕರು ದಾಖಲೆ ಕೇಳಿದ್ರೆ ಅದನ್ನು ಕಂಪನಿ ನೀಡಬೇಕಾಗುತ್ತದೆ. ವಿಮೆ ಪಡೆಯುವ ಪ್ರಕ್ರಿಯೆ ಇನ್ಮುಂದೆ ಮೊದಲಿಗಿಂತ ಬೇಗ ಆಗಲಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...