alex Certify ವಾಟ್ಸಾಪ್‌ ಮೂಲಕ ಸಿಲಿಂಡರ್‌ ಬುಕ್‌ ಮಾಡಲು ಇಲ್ಲಿದೆ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಾಟ್ಸಾಪ್‌ ಮೂಲಕ ಸಿಲಿಂಡರ್‌ ಬುಕ್‌ ಮಾಡಲು ಇಲ್ಲಿದೆ ಮಾಹಿತಿ

ಇಷ್ಟು ದಿನ ಗ್ಯಾಸ್ ಸಿಲಿಂಡರ್ ಬುಕ್ ಮಾಡಬೇಕು ಎಂದರೆ ಕರೆ ಮಾಡುವ ಮೂಲಕ ಬುಕ್ ಮಾಡಬಹುದಾಗಿತ್ತು.‌ ಜೊತೆಗೆ ನಿಗದಿಪಡಿಸಿದ ಆಪ್ ಹಾಗೂ ವೆಬ್‌ ಸೈಟ್‌ ಮೂಲಕ ಮಾತ್ರ ಈ ಸೌಲಭ್ಯವಿತ್ತು. ಆದರೆ ಇದೀಗ ವಾಟ್ಸಾಪ್ ಮೂಲಕವೂ ಗ್ಯಾಸ್ ಬುಕ್ ಮಾಡುವ ಅವಕಾಶವನ್ನು ನೀಡಲಾಗಿದೆ. ಈ ಮೂಲಕ ಇನ್ಮುಂದೆ ಸರಳವಾಗಿ ಗ್ಯಾಸ್ ಬುಕ್ ಮಾಡಬಹುದಾಗಿದೆ.

ಹೌದು, ದೇಶದ ಅನಿಲ ಗ್ರಾಹಕರಿಗೆ ಭಾರತ್ ಪೆಟ್ರೋಲಿಯಂ ಮತ್ತೊಂದು ಸೌಲಭ್ಯ ನೀಡುತ್ತಿದೆ. ಎಲ್‌ಪಿಜಿ ಗ್ರಾಹಕರು ತಮ್ಮ ಗ್ಯಾಸ್ ಸಿಲಿಂಡರ್‌ಗಳನ್ನು ಈ 180022434 ಸಂಖ್ಯೆಯ ವಾಟ್ಸಾಪ್ ‌ನಲ್ಲಿ ಬುಕ್ ಮಾಡಬಹುದು.

ಗ್ಯಾಸ್ ಏಜೆನ್ಸಿಯಲ್ಲಿ ನೋಂದಾಯಿಸಲಾಗಿರುವ ಫೋನ್ ಸಂಖ್ಯೆಯೊಂದಿಗೆ ವಾಟ್ಸಾಪ್‌ ನಲ್ಲಿ 180022434 ನಂಬರ್‌ಗೆ ಸಿಲಿಂಡರ್ ಅನ್ನು ಕಾಯ್ದಿರಿಸಬೇಕು. ನಂತರ ಗ್ರಾಹಕರ ನೋಂದಾಯಿತ ಫೋನ್ ಸಂಖ್ಯೆಗೆ ಸಂದೇಶವನ್ನು ಕಳುಹಿಸಲಾಗುತ್ತದೆ. ಅದರಲ್ಲಿ ಬುಕಿಂಗ್ ಸಂಖ್ಯೆಯನ್ನು ನಮೂದಿಸಲಾಗುತ್ತದೆ. ಇಲ್ಲಿ ಆನ್‌ ಲೈನ್ ಮೂಲಕ ಹಣ ಪಾವತಿ ಮಾಡಬೇಕಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...