alex Certify ಲಾಕ್ ಡೌನ್ ಮಧ್ಯೆ ಈ ಬ್ಯಾಂಕ್ ನೀಡ್ತಿದೆ FD ಮೇಲೆ ಶೇ.9ರವರೆಗೆ ಬಡ್ಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಾಕ್ ಡೌನ್ ಮಧ್ಯೆ ಈ ಬ್ಯಾಂಕ್ ನೀಡ್ತಿದೆ FD ಮೇಲೆ ಶೇ.9ರವರೆಗೆ ಬಡ್ಡಿ

ಕೊರೊನಾ ವೈರಸ್ ಹಿನ್ನಲೆಯಲ್ಲಿ ದೇಶದಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ಲಾಕ್ ಡೌನ್ ಹಿನ್ನಲೆಯಲ್ಲಿ ಆರ್ಥಿಕ ಸಮಸ್ಯೆ ಎದುರಾಗಿದೆ. ಈ ಮಧ್ಯೆ ಆರ್ ಬಿ ಐ ಬಡ್ಡಿ ದರಗಳನ್ನು ಕಡಿತಗೊಳಿಸಿದ ನಂತರ ಬಹುತೇಕ ಎಲ್ಲಾ ಪ್ರಮುಖ ಬ್ಯಾಂಕುಗಳು ಉಳಿತಾಯದ ಮೇಲಿನ ಬಡ್ಡಿ ದರಗಳನ್ನು ಇಳಿಸಿವೆ. ಮೊದಲಿಗಿಂತ ಎಫ್‌ಡಿ ಮೇಲೆ ಕಡಿಮೆ ಬಡ್ಡಿ ದರ ಸಿಗ್ತಿದೆ. ಆದ್ರೆ ಈ ಸಮಯದಲ್ಲೂ ಕೆಲವೇ ಕೆಲ ಬ್ಯಾಂಕ್ ಎಫ್ ಡಿ ಮೇಲಿನ ಬಡ್ಡಿ ದರ ಶೇಕಡಾ 9ರಷ್ಟು ಸಿಗ್ತಿದೆ.

ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕಿನಲ್ಲಿ 5 ರಿಂದ 29 ದಿನಗಳು, 30 ರಿಂದ 89 ದಿನಗಳು ಮತ್ತು 90 ರಿಂದ 179 ದಿನಗಳವರೆಗಿನ ಎಫ್ಡಿ ಗೆ ಕ್ರಮವಾಗಿ ಶೇಕಡಾ 5.50, ಶೇಕಡಾ 6.10 ಮತ್ತು ಶೇಕಡಾ 6.60 ರಷ್ಟು ಬಡ್ಡಿ ಸಿಗ್ತಿದೆ. 180 ದಿನಗಳಿಂದ 364 ದಿನಗಳವರೆಗಿನ ಎಫ್ ಡಿ ಗೆ ಶೇಕಡಾ 7ರಷ್ಟು ಬಡ್ಡಿ ಸಿಗ್ತಿದೆ.  1 ವರ್ಷದಿಂದ 2 ವರ್ಷಗಳಲ್ಲಿ ಪಕ್ವವಾಗುವ ಎಫ್‌ಡಿಗಳ ಬಡ್ಡಿದರ ಶೇಕಡಾ 8ರಷ್ಟಿದೆ.

ಸೂರ್ಯೋದಯ್ ಸ್ಮಾಲ್ ಫೈನಾನ್ಸ್ ಬ್ಯಾಂಕಿನಲ್ಲಿ ಸ್ಥಿರ ಠೇವಣಿಗಳ ಮೇಲಿನ ಬಡ್ಡಿ ದರಗಳು ಶೇಕಡಾ 4 ರಿಂದ 9 ರವರೆಗಿದೆ. ಬ್ಯಾಂಕ್ 1 ವರ್ಷದಿಂದ 2 ವರ್ಷಗಳವರೆಗೆ ಮತ್ತು ಕ್ರಮವಾಗಿ 2 ವರ್ಷದಿಂದ 3 ವರ್ಷಗಳ ಅವಧಿಯಲ್ಲಿ ಶೇಕಡಾ 8 ಮತ್ತು ಶೇಕಡಾ 8.25 ರಷ್ಟು ಬಡ್ಡಿ ಸಿಗ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...