alex Certify ರೈಲು ಪ್ರಯಾಣಿಕರೇ ಇಲ್ಲಿದೆ ಒಂದು ಮಹತ್ವದ ಸುದ್ದಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈಲು ಪ್ರಯಾಣಿಕರೇ ಇಲ್ಲಿದೆ ಒಂದು ಮಹತ್ವದ ಸುದ್ದಿ..!

ಜೂನ್ 1 ರಿಂದ ರೈಲು ಸಂಚಾರ : ರೈಲು ...

ಇಷ್ಟು ದಿನ ರೈಲು ಸರಿಯಾದ ಸಮಯಕ್ಕೆ ಬರುತ್ತಿಲ್ಲ. ಎಲ್ಲಿ ಇದೆಯೋ ಏನೋ ಎಂಬ ಪ್ರಶ್ನೆಗಳು ರೈಲು ಪ್ರಯಾಣಿಕರಿಗೆ ಕಾಡುತ್ತಲೇ ಇದ್ದವು. ಆದರೆ ಇನ್ಮುಂದೆ ಹಾಗಲ್ಲ. ರೈಲು ಎಷ್ಟೊತ್ತಿಗೆ ತಾವಿರುವ ಸ್ಟೇಷನ್ ತಲುಪುತ್ತದೆ. ಈ ಸಮಯಕ್ಕೆ ಎಲ್ಲಿದೆ. ಯಾವ ಸ್ಟೇಷನ್ ಬಳಿ ಇದೆ ಎಂಬ ಸ್ಪಷ್ಟ ಮಾಹಿತಿ ನಿಮಗೆ ತಿಳಿಯಲಿದೆ.

ಹೌದು, ಯೇ ರಿಯಲ್ ಟೈಮ್ ಇನ್ಫರ್ಮೇಶನ್ ಸಿಸ್ಟಮ್ ಆಧಾರದ ಮೇಲೆ ರೈಲಿನ ಲೊಕೇಷನ್ ಮಾಹಿತಿಗಾಗಿ ನ್ಯಾಷನಲ್ ರೈಲು ವಿಚಾರಣೆಯನ್ನು ಅಪ್‌ಗ್ರೇಡ್ ಮಾಡಲಾಗುತ್ತಿದೆ. ಈ ಮೂಲಕ ರೈಲು ಎಷ್ಟೊತ್ತಿಗೆ ತಾವಿರುವ ಸ್ಥಳಗಳನ್ನು ತಲುಪುತ್ತದೆ ಎಂಬ ಸ್ಪಷ್ಟ ಮಾಹಿತಿ ಸಿಗಲಿದೆ. ರೈಲುಗಳಿಗೆ ಜಿಪಿಎಸ್ ಅಳವಡಿಸುವ ಮೂಲಕ ಈ ಮಾಹಿತಿ ಕಲೆ ಹಾಕಲಾಗುತ್ತಿದೆ.

ಶೀಘ್ರದಲ್ಲಿಯೇ ಈ ವ್ಯವಸ್ಥೆ ಜಾರಿಗೆ ಬರಲಿದೆ. ಇನ್ನು ಭಾರತೀಯ ಬಾಹ್ಯಾಕಾಶ ಸಂಸ್ಥೆ ರೈಲುಗಳ ಜಿಪಿಎಸ್ ಮೇಲೆ ನಿಗಾ ವಹಿಸಲಿದೆ. ಈಗಾಗಲೇ ಸುಮಾರು 2700 ಇಂಜಿನ್‌ಗಳಲ್ಲಿ ಡಿವೈಸ್‌ಗಳನ್ನು ಅಳವಡಿಸಲಾಗಿದ್ದು ಕೆಲಸಗಳು ಆರಂಭವಾಗಿವೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...