alex Certify ಮನೆ ಖರೀದಿದಾರರಿಗೆ ಖುಷಿ ಸುದ್ದಿ ನೀಡಿದ LIC | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆ ಖರೀದಿದಾರರಿಗೆ ಖುಷಿ ಸುದ್ದಿ ನೀಡಿದ LIC

ಎಲ್‌ಐಸಿ ಅಂಗಸಂಸ್ಥೆಯಾದ ಎಲ್‌ಐಸಿ ಹೌಸಿಂಗ್ ಫೈನಾನ್ಸ್ ಗೃಹ ಸಾಲದ ಬಡ್ಡಿದರವನ್ನು ಕಡಿತಗೊಳಿಸಿದೆ. ಎಲ್ಐಸಿ ಹೌಸಿಂಗ್ ಫೈನಾನ್ಸ್ ವೈಯಕ್ತಿಕ ಗೃಹ ಸಾಲ ಪಡೆಯುವವರಿಗೆ ತನ್ನ ಬಡ್ಡಿದರಗಳನ್ನು ಕಡಿಮೆ ಮಾಡಿದೆ. ಸಿಬಿಲ್ ಸ್ಕೋರ್ 800 ಅಥವಾ ಹೆಚ್ಚಿನದಾಗಿದ್ದರೆ ಹೊಸ ಗ್ರಾಹಕರಿಗೆ ವಾರ್ಷಿಕ ಶೇಕಡಾ 7.5 ಬಡ್ಡಿಗೆ ಸಾಲವನ್ನು ನೀಡಲಿದೆ. ಈ ಹಿಂದೆ ಗೃಹ ಸಾಲ ಬಡ್ಡಿದರ ಶೇಕಡಾ 8.10 ರಷ್ಟಿತ್ತು.

ಪ್ರೀಮಿಯಂ ಟರ್ಮ್ ಇನ್ಶುರೆನ್ಸ್ ಪಾಲಿಸಿಯನ್ನು ಗ್ರಾಹಕರು ಹೊಂದಿದ್ದರೆ ಅದನ್ನು 10 ಬಿಪಿಎಸ್ ಅಥವಾ ಶೇಕಡಾ 7.40ರ ದರದಲ್ಲಿ ಸಾಲ ನೀಡಲಾಗುವುದು ಎಂದು ಎಲ್ ಐಸಿ ಹೇಳಿದೆ. ಸಾಲಗಾರನ ಸಿಬಿಲ್ ಸ್ಕೋರ್‌ಗೆ ಬಡ್ಡಿದರವನ್ನು ಸೇರಿಸಲಾಗುತ್ತದೆ. ಬಡ್ಡಿದರ ಕಡಿತವು ತಕ್ಷಣ ಜಾರಿಗೆ ಬರಲಿದೆ.

ಹೌಸಿಂಗ್ ಫೈನಾನ್ಸ್ ಕಂಪನಿ ಎಚ್‌ಡಿಎಫ್‌ಸಿ ಬಡ್ಡಿದರಗಳನ್ನು ಶೇಕಡಾ 0.15 ರಷ್ಟು ಕಡಿತಗೊಳಿಸಿದೆ. ಎಚ್‌ಡಿಎಫ್‌ಸಿಯ ಅಸ್ತಿತ್ವದಲ್ಲಿರುವ ಎಲ್ಲಾ ಚಿಲ್ಲರೆ ಗೃಹ ಸಾಲಗಾರರು ಈ ಕಡಿತದ ಲಾಭವನ್ನು ಪಡೆಯುತ್ತಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...