ಕುತಂತ್ರಿ ಚೀನಾ, ಭಾರತದ ಸುಮಾರು 10 ಸಾವಿರ ಮಂದಿ ಪ್ರಮುಖರ ಮೇಲೆ ಕಣ್ಗಾವಲಿರಿಸಿದೆ ಎಂಬ ಮಾತುಗಳ ಮಧ್ಯೆ ಇದೀಗ ಭಾರತೀಯರ ದತ್ತಾಂಶ ಕಳವಿನ ಕುರಿತು ಶಾಕಿಂಗ್ ಸಂಗತಿ ಬಹಿರಂಗವಾಗಿದೆ.
ಬೇಹುಗಾರಿಕಾ ಸಂಸ್ಥೆ ಮೂಲಗಳು ಈ ಮಾಹಿತಿಯನ್ನು ನೀಡಿವೆ ಎನ್ನಲಾಗಿದ್ದು, ಭಾರತದಲ್ಲಿ ಚೀನಾದ ಐಟಿ ದಿಗ್ಗಜ ಆಲಿಬಾಬಾ ಸಂಸ್ಥೆ ಹೊಂದಿರುವ ಕನಿಷ್ಠ 72 ಸರ್ವರ್ ಗಳ ಮೂಲಕ ಭಾರತೀಯ ಬಳಕೆದಾರರ ದತ್ತಾಂಶವನ್ನು ಚೀನಾಗೆ ರವಾನಿಸುತ್ತಿದೆ ಎನ್ನಲಾಗಿದೆ.
ಸಂಘ – ಸಂಸ್ಥೆಗಳಿಗೆ ಉಚಿತ ಟ್ರಯಲ್ ನೀಡುವ ಈ ಸರ್ವರ್ ಗಳು ಬಳಿಕ ಅಲ್ಲಿನ ಎಲ್ಲ ಮಾಹಿತಿಗಳನ್ನು ಕಲೆಹಾಕಿ ಚೀನಾದಲ್ಲಿರುವ ಸರ್ವರ್ ಗಳಿಗೆ ರವಾನಿಸುತ್ತದೆ ಎಂದು ಹೇಳಲಾಗಿದೆ.