ಗ್ರಾಮೀಣ ಕುಟುಂಬಗಳಿಗೆ ಆಸ್ತಿ ಹಕ್ಕಿನ ಕಾರ್ಡ್ ನೀಡುವ ಸ್ವಾಮಿತ್ವ ಯೋಜನೆಗೆ ಪ್ರಧಾನಿ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದ್ದಾರೆ. ಆದರೆ ಈ ಯೋಜನೆ ರೈತರಿಗೆ, ಹಳ್ಳಿಗಾಡಿನ ಜನರಿಗೆ ಹೇಗೆ ನೆರವಾಗುತ್ತದೆ ಎಂಬುದಕ್ಕೆ ಉತ್ತರ ಇಲ್ಲಿದೆ ನೋಡಿ.
ಈ ಕಾರ್ಡ್ ಆಧಾರ್ ಕಾರ್ಡ್ ತರಹ ಇರುತ್ತದೆ. ಡಿಜಿಟಲ್ ಭಾರತದ ಭಾಗವಾಗಿ ರೂಪಿಸಲಾದ ಈ ಸ್ವಾಮಿತ್ವ ಕಾರ್ಡ್‌ನಲ್ಲಿಯೇ ತಮ್ಮ ಎಲ್ಲಾ ಆಸ್ತಿಗಳ ದಾಖಲೆಗಳು ಸಿಗಲಿವೆ. ಇದರಿಂದ ರೈತರಿಗೆ ತುಂಬಾ ಅನುಕೂಲ ಆಗಲಿದೆ. ಗ್ರಾಮೀಣ ಕುಟುಂಬಗಳು ಸಾಲ ಮತ್ತು ಇತರೆ ಹಣಕಾಸು ಸೌಲಭ್ಯ ಪಡೆಯಲು ಈ ಕಾರ್ಡನ್ನು ಬಳಸಬಹುದಾಗಿದೆ.
ಈ ಯೋಜನೆ ಯುವಕರಿಗೂ ಅನುಕೂಲ ಆಗಲಿದೆ. ತಾವು ಮಾಡುವ ಉದ್ಯೋಗಕ್ಕೆ ಸಾಲ ಪಡೆಯಲು ಸಾಧ್ಯವಾಗೋದಿಲ್ಲ ಅಥವಾ ತಮ್ಮ ಆಸ್ತಿ ಇದ್ದರೂ ಸಾಲ ಪಡೆಯುವುದು ಕಷ್ಟ ಎನ್ನುತ್ತಿದ್ದವರಿಗೆ ಈ ಯೋಜನೆ ನೆರವಾಗುತ್ತದೆ. ತಮ್ಮ ಆಸ್ತಿಗಳ ಮೇಲೆ ನೇರವಾಗಿ ಹಾಗೂ ಸುಲಭ ಮಾರ್ಗದಿಂದ ಸಾಲ ಪಡೆಯಬಹುದಾಗಿದೆ.
ದೇಶಾದ್ಯಂತ ಮೊದಲ ಹಂತದಲ್ಲಿ 6 ರಾಜ್ಯಗಳ 763 ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ. ಉತ್ತರ ಪ್ರದೇಶದ 346, ಹರ್ಯಾಣದ 221, ಮಹಾರಾಷ್ಟ್ರದ 100, ಉತ್ತರಾಖಂಡದ 50, ಮಧ್ಯಪ್ರದೇಶದ 44, ಕರ್ನಾಟಕದ 2 ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಇಡೀ ದೇಶದ ಎಲ್ಲಾ ಹಳ್ಳಿಯ ಜನರ ಕುಟುಂಬಗಳಿಗೆ ಈ ಯೋಜನೆ ವಿಸ್ತರಿಸಲಾಗುತ್ತದೆ.