ನವದೆಹಲಿ: ಕಾರ್ಮಿಕರ ನಿಯಮ ಉಲ್ಲಂಘನೆ ಮಾಡಿದ ಕಾರಣಕ್ಕೆ ಆ್ಯಪಲ್ ಸಂಸ್ಥೆ ಚೀನಾದಲ್ಲಿ ತನ್ನ ಐಫೋನ್ ತಯಾರಿಕಾ ಪೆಗಟ್ರಾನ್ ಕಂಪನಿಯ ವ್ಯವಹಾರ ಸೇವೆಯನ್ನು ಸ್ಥಗಿತಗೊಳಿಸಿದೆ.
ಪೆಗಟ್ರಾನ್ ಕಂಪನಿ ತನ್ನ ಉದ್ಯೋಗಿಗಳನ್ನು ತಡರಾತ್ರಿವರೆಗೆ ದುಡಿಸಿಕೊಳ್ಳುವುದಲ್ಲದೇ, ಸ್ಟುಡೆಂಟ್ ವರ್ಕರ್ಸ್ ಪ್ರೋಗ್ರಾಮ್ ಯೋಜನೆಯನ್ನು ದುರುಪಯೋಗಪಡಿಸಿಕೊಂಡಿತ್ತು. ಈ ಮೂಲಕ ಆ್ಯಪಲ್ ಸಂಸ್ಥೆಯ ನಿಮಾವಳಿಗಳನ್ನು ಗಾಳಿಗೆ ತೂರಿತ್ತು ಎನ್ನಲಾಗಿದೆ. ಇದೇ ಕಾರಣಕ್ಕೆ ಆ್ಯಪಲ್ ಸಂಸ್ಥೆ ಪೆಗಟ್ರಾನ್ ನ ಸೇವೆ ಸ್ಥಗಿತಗೊಳಿಸಿದೆ.
ಚೀನಾದಲ್ಲಿನ ಪೆಗಟ್ರಾನ್ ಕಂಪನಿಯೊಂದಿಗಿನ ತನ್ನ ವ್ಯವಹಾರ ಕಾರ್ಯವನ್ನು ಸ್ಥಗಿತಗೊಳಿಸಿರುವುದಾಗಿ ಆ್ಯಪಲ್ ಸಂಸ್ಥೆ ತಿಳಿಸಿದೆ.