alex Certify ಪಿಂಚಣಿದಾರರಿಗೆ ಖುಷಿ ಸುದ್ದಿ ನೀಡಿದ ಸರ್ಕಾರ: 15 ವರ್ಷಗಳ ಬಳಿಕ ಮತ್ತೆ ಮಹತ್ವದ ನಿರ್ಧಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಿಂಚಣಿದಾರರಿಗೆ ಖುಷಿ ಸುದ್ದಿ ನೀಡಿದ ಸರ್ಕಾರ: 15 ವರ್ಷಗಳ ಬಳಿಕ ಮತ್ತೆ ಮಹತ್ವದ ನಿರ್ಧಾರ

ಇಪಿಎಸ್ ಪಿಂಚಣಿದಾರರಿಗೆ ಒಳ್ಳೆಯ ಸುದ್ದಿ. ಹೆಚ್ಚಿನ ಪಿಂಚಣಿ ಪಡೆಯುವ ಅವಕಾಶ ಸಿಗ್ತಿದೆ. ನಿವೃತ್ತಿಯ 15 ವರ್ಷಗಳ ನಂತರ ಪೂರ್ಣ ಪಿಂಚಣಿ ನೀಡುವ ನಿರ್ಧಾರವನ್ನು ಸರ್ಕಾರ ಮತ್ತೆ ತೆಗೆದುಕೊಂಡಿದೆ.

ಮೇ ತಿಂಗಳಿನಿಂದ ಹೊಸ ನಿಯಮ ಜಾರಿಗೆ ಬರುವ ಸಾಧ್ಯತೆ ದಟ್ಟವಾಗಿದೆ. ಈ ನಿಯಮವನ್ನು 2009 ರಲ್ಲಿ ಹಿಂಪಡೆಯಲಾಗಿತ್ತು. 2020ರ ಫೆಬ್ರವರಿಯಲ್ಲಿ ಸಂಪೂರ್ಣ ಪಿಂಚಣಿಯನ್ನು ಮತ್ತೆ ಶುರು ಮಾಡಲು ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಅದನ್ನು ಜಾರಿಗೆ ತರಲು ಸ್ವಲ್ಪ ಸಮಯ ಹಿಡಿದಿದ್ದು, ಈಗ ಸರ್ಕಾರ ಸಂಪೂರ್ಣ ಸಿದ್ಧವಾಗಿದೆ. ಸರ್ಕಾರದ ಈ ತೀರ್ಮಾನದಿಂದ  ಪ್ರತಿ ತಿಂಗಳು 630,000 ಪಿಂಚಣಿದಾರರಿಗೆ ಪ್ರಯೋಜನವಾಗಲಿದೆ.

ನೌಕರರ ಪಿಂಚಣಿ ಯೋಜನೆಯ ನಿಯಮಗಳ ಪ್ರಕಾರ, 26 ಸೆಪ್ಟೆಂಬರ್ 2008 ರ ಮೊದಲು ನಿವೃತ್ತರಾದ ಇಪಿಎಫ್‌ಒ ಸದಸ್ಯರು ತಮ್ಮ ಪಿಂಚಣಿಯ ಗರಿಷ್ಠ ಮೂರನೇ ಒಂದು ಭಾಗವನ್ನು ಒಟ್ಟು ಮೊತ್ತವಾಗಿ ಪಡೆಯಬಹುದು. ಉಳಿದ ಮೂರನೇ ಎರಡರಷ್ಟು ಪಿಂಚಣಿ ಮಾಸಿಕ ಪಿಂಚಣಿಯಾಗಿ ಸಿಗಲಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...