alex Certify ಪಾಲಿಸಿದಾರರಿಗೆ ನೆರವಾಗಲಿದೆ ʼಎಲ್ಐಸಿʼಯ ಈ ವಿಶೇಷ ಯೋಜನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಾಲಿಸಿದಾರರಿಗೆ ನೆರವಾಗಲಿದೆ ʼಎಲ್ಐಸಿʼಯ ಈ ವಿಶೇಷ ಯೋಜನೆ

ಕೊರೊನಾದಿಂದಾಗಿ ಪ್ರತಿಯೊಬ್ಬರೂ ಇಂದು ಆರೋಗ್ಯ ವಿಮೆಯನ್ನು ಪಡೆಯುವುದು ಅವಶ್ಯಕವಾಗಿದೆ. ವಿಮಾ ಪಾಲಿಸಿಯನ್ನು ಖರೀದಿಸಲು ಯೋಜಿಸುತ್ತಿದ್ದರೆ ಎಲ್ಐಸಿ ಆಮ್ ಆದ್ಮಿ ಬೀಮಾ ಯೋಜನೆ ಹೆಸರಿನಲ್ಲಿ  ಸಾಮಾಜಿಕ ಭದ್ರತಾ ಯೋಜನೆ ನಡೆಸುತ್ತಿದೆ. ಅಸಂಘಟಿತ ವಲಯದ ಕಾರ್ಮಿಕರಿಗಾಗಿ ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಆಮ್ ಆದ್ಮಿ ಬೀಮಾ ಯೋಜನೆಯನ್ನು ಜೀವ ವಿಮಾ ನಿಗಮ ನಡೆಸುತ್ತಿದೆ.

ಈ ವಿಮಾ ಯೋಜನೆಗಾಗಿ 18 ರಿಂದ 59 ವರ್ಷ ವಯಸ್ಸಿನವರು ಅರ್ಜಿ ಸಲ್ಲಿಸಬಹುದು. ಅರ್ಜಿದಾರನು ಕುಟುಂಬದ ಮುಖ್ಯಸ್ಥನಾಗಿರಬೇಕು ಅಥವಾ ಮನೆಯ ಸಂಪಾದಿಸುವ ಸದಸ್ಯನಾಗಿರಬೇಕು. ಬಡತನ ರೇಖೆಯ ಕೆಳಗೆ ಅಥವಾ ಬಡತನ ರೇಖೆಗಿಂತ ಮೇಲಿರುವ ನಗರದಲ್ಲಿ ವಾಸಿಸುವ ಅಥವಾ ಗ್ರಾಮೀಣ ಪ್ರದೇಶದ ಭೂಹೀನರಾಗಿರಬೇಕು.

30,000 ರೂಪಾಯಿ ವಿಮೆಗಾಗಿ ಪಾಲಿಸಿದಾರ ಪ್ರತಿ ವರ್ಷ 200 ರೂಪಾಯಿ ಪಾವತಿ ಮಾಡಬೇಕು. ಇದರಲ್ಲಿ 50 ಪ್ರತಿಶತದಷ್ಟು ಭದ್ರತಾ ನಿಧಿಯನ್ನು ರಾಜ್ಯ ಸರ್ಕಾರ ಅಥವಾ ಕೇಂದ್ರಾಡಳಿತ ಪ್ರದೇಶವು ಭರಿಸುತ್ತದೆ. ಪಾಲಿಸಿದಾರನ ಸಹಜ ಸಾವಿನಲ್ಲಿ 30 ಸಾವಿರ ನಾಮಿನಿಗೆ ಸಿಗಲಿದೆ. ಅಪಘಾತದಲ್ಲಿ ಸಾವನ್ನಪ್ಪಿದ್ರೆ 75 ಸಾವಿರ ರೂಪಾಯಿ ಸಿಗಲಿದೆ. ಅಂಗವೈಕಲ್ಯವಾದ್ರೆ 37,500 ರೂಪಾಯಿ ಸಿಗಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...