alex Certify ದಂಗಾಗಿಸುವಂತಿದೆ ವಿಶ್ವದ ಅತಿ ಸಿರಿವಂತನ ಸಂಪತ್ತು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಂಗಾಗಿಸುವಂತಿದೆ ವಿಶ್ವದ ಅತಿ ಸಿರಿವಂತನ ಸಂಪತ್ತು

ವಿಶ್ವದಲ್ಲಿ ಕಾಡುತ್ತಿರುವ ಮಹಾಮಾರಿ ಕೊರೊನಾ ವೈರಸ್ ಅನೇಕರ ಬದುಕನ್ನು ಹೈರಾಣಾಗಿಸಿದೆ. ಇದರ ನಿಯಂತ್ರಣಕ್ಕಾಗಿ ವಿಶ್ವದ ಬಹುತೇಕ ರಾಷ್ಟ್ರಗಳು ಲಾಕ್ ಡೌನ್ ಜಾರಿಗೊಳಿಸಿರುವುದರಿಂದ ಆರ್ಥಿಕ ವಹಿವಾಟಿಲ್ಲದೆ ಜನತೆ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕೊರೊನಾ ಮಹಾಮಾರಿ ಸಿರಿವಂತರಿಗೂ ಕಾಡಿದ್ದು, ಅವರ ಸಂಪತ್ತಿನಲ್ಲಿ ಇಳಿಕೆಯಾಗಿದೆ. ವಿಶ್ವದ ಅತ್ಯಂತ ಸಿರಿವಂತ ಉದ್ಯಮಿ ಎಂಬ ಹೆಗ್ಗಳಿಕೆ ಹೊಂದಿರುವ ಅಮೆಜಾನ್ ಸ್ಥಾಪಕ ಜೆಫ್ ಬೆಜೊಸ್ ಅವರ ಉದ್ಯಮಕ್ಕೂ ಇದು ಪರಿಣಾಮ ಬೀರಿದ್ದು, ಆದರೆ ಮುಂದಿನ ಆರು ವರ್ಷಗಳ ಕಾಲ ಅವರಿಗೆ ಸಿರಿವಂತ ಪಟ್ಟ ಮುಂದುವರಿಯಲಿದೆ.

ಉದ್ಯಮ ಸಲಹಾ ಸಂಸ್ಥೆ ಕಂಪರಿಸನ್ ನಡೆಸಿರುವ ಸಂಶೋಧನೆ ಪ್ರಕಾರ 2026 ರ ವೇಳೆಗೆ ಜೆಫ್ ಬೆಜೊಸ್ ಅವರ ಆಸ್ತಿ 1000 ಶತಕೋಟಿ ಡಾಲರ್ ತಲುಪಲಿದೆ ಎನ್ನಲಾಗಿದ್ದು, ವಿಶ್ವದ ಮೊದಲ ಟ್ರಿಲೆನಿಯರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...