ನೀವು ಎಸ್ಬಿಐ ಗ್ರಾಹಕರಾಗಿದ್ದರೆ ಈ ಸುದ್ದಿ ಓದಲೇಬೇಕು. ಎಸ್ಬಿಐ ತನ್ನ ಗ್ರಾಹಕರಿಗೆ ಮಹತ್ವದ ಎಚ್ಚರಿಕೆಯೊಂದನ್ನು ನೀಡಿದೆ. ಆನ್ಲೈನ್ ಅಥವಾ ಹೊಸ ಹೊಸ ಅಪ್ಲಿಕೇಷನ್ ಮೂಲಕ ಮೋಸದ ಜಾಲಗಳನ್ನು ನಂಬಬೇಡಿ ಎಂದು ಗ್ರಾಹಕರಿಗೆ ಎಚ್ಚರಿಸಿದೆ ಎಸ್ಬಿಐ.
ಹೌದು, ಅನಧಿಕೃತ ಮೊಬೈಲ್ ಅಪ್ಲಿಕೇಶನ್ಗಳನ್ನು ಅಥವಾ ಆಪ್ ಗಳನ್ನು ಡೌನ್ಲೋಡ್ ಮಾಡದಂತೆ ಎಸ್ಬಿಐ ತನ್ನ ಗ್ರಾಹಕರಿಗೆ ಸೂಚನೆ ನೀಡಿದೆ. ಇತ್ತೀಚಿನ ದಿನಗಳಲ್ಲಿ ರಿಮೋಟ್ ಆಕ್ಸೆಸ್ ಮೊಬೈಲ್ ಹಗರಣಗಳು ಹೆಚ್ಚಾಗುತ್ತಿದ್ದು, ಇಂತಹ ಮೋಸದ ಜಾಲಕ್ಕೆ ನೀವು ಸಿಲುಕಿ ಹಣ ಕಳೆದುಕೊಳ್ಳಬೇಡಿ ಎಂದು ಟ್ವಿಟ್ ಮಾಡುವ ಮೂಲಕ ಎಚ್ಚರಿಕೆ ನೀಡಿದೆ.
ಅನೇಕ ಮಂದಿ ಹ್ಯಾಕರ್ಗಳು ಬ್ಯಾಂಕ್ನ ಸಿಬ್ಬಂದಿಯೆಂದು ಫೋನ್ ಮಾಡಿ ನಿಮ್ಮ ಖಾತೆಯ ವಿವರ ಕೇಳುತ್ತಾರೆ. ಅಥವಾ ಇಮೇಲ್ಗಳು, ಎಸ್ಎಂಎಸ್, ವೆಬ್ ಲಿಂಕ್ಗಳ ಮೂಲಕ ಮಾಹಿತಿ ಪಡೆಯುತ್ತಾರೆ. ಇಂತಹ ಸಮಯಲ್ಲಿ ಗ್ರಾಹಕರು ತಮ್ಮ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳದಂತೆ ಎಸ್ಬಿಐ ಎಚ್ಚರಿಸಿದೆ. ಇನ್ನು ಯಾವುದೇ ಮಾಹಿತಿಗೆ ಬ್ಯಾಂಕಿನ ಗ್ರಾಹಕ ಬೆಂಬಲ ಟೋಲ್ ಫ್ರೀ ಸಂಖ್ಯೆ 18004253800 ಅಥವಾ 1800112211ಗೆ ಕರೆ ಮಾಡಿ ಎಂದು ತಿಳಿಸಿದೆ.