alex Certify ಟಿವಿಎಸ್​ ಅಪಾಚೆ ಬೈಕ್ ಪ್ರಿಯರಿಗೆ ಇಲ್ಲಿದೆ ಖುಷಿ ಸುದ್ದಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟಿವಿಎಸ್​ ಅಪಾಚೆ ಬೈಕ್ ಪ್ರಿಯರಿಗೆ ಇಲ್ಲಿದೆ ಖುಷಿ ಸುದ್ದಿ…!

ವಾಹನಗಳ ಮಾರಾಟ ಉದ್ಯಮದಲ್ಲಿ ತನ್ನದೇ ಆದ ಚಾಪನ್ನ ಮೂಡಿಸಿರೋ ಟಿವಿಎಸ್​ ಕಂಪನಿ ಅಂದ್ರೆ ಯಾರಿಗ್​ ತಾನೇ ಗೊತ್ತಿಲ್ಲ ಹೇಳಿ. ಗ್ರಾಹಕ ಸ್ನೇಹಿ ದರ, ವಿಶಿಷ್ಟ ವಿನ್ಯಾಸಗಳ ಮೂಲಕ ಪ್ರಚಲಿತದಲ್ಲಿರೋ ಟಿವಿಎಸ್​ ಇದೀಗ ಮತ್ತೊಂದು ಸಾಧನೆಯ ಗರಿಯನ್ನ ಮುಡಿಗೇರಿಸಿಕೊಂಡಿದೆ.

ಟಿವಿಎಸ್​ ಅನೇಕ ವಿನ್ಯಾಸದ ಬೈಕ್​ಗಳನ್ನ ಮಾರುಕಟ್ಟೆಗೆ ಪರಿಚಯಿಸಿದೆ. ಇದರಲ್ಲಿ ಅಪಾಚೆ ಸರಣಿಯ ಬೈಕ್​ಗಳು ತುಂಬಾನೇ ಫೇಮಸ್​. 2005ರಲ್ಲಿ ಅಪಾಚೆಯ ಮೊದಲ ಸರಣಿಯ ಬೈಕ್​ನ್ನ ಟಿವಿಎಸ್ ಮಾರುಕಟ್ಟೆಗೆ ಪರಿಚಯಿಸಿತ್ತು. ಇದೀಗ ಈ ಅಪಾಚೆ ಬೈಕ್​ಗಳು ನಾಲ್ಕು ಮಿಲಿಯನ್​ ಜಾಗತಿಕ ಮಾರಾಟದ ಮೈಲಿಗಲ್ಲನ್ನ ತಲುಪಿವೆ.

ಹೊಸ ವಿನ್ಯಾಸದ ಮೂಲಕ ಯುವಜನತೆಯನ್ನ ಸೆಳೆಯಬೇಕು ಅಂತಾ ಹೊರಟಿದ್ದ ಟಿವಿಎಸ್​ ಸ್ಪೋರ್ಟ್ಸ್​ ಬೈಕ್​ಗಳ ಮಾದರಿಯಲ್ಲಿ ಅಪಾಚೆ ಬೈಕ್​ನ್ನ ವಿನ್ಯಾಸಗೊಳಿಸಿತ್ತು. 160 ಸಿಸಿಯಿಂದ 310 ಸಿಸಿವರೆಗಿನ ಬೈಕ್​ಗಳು ಅಪಾಚೆ ಸೀರಿಸ್​ನಲ್ಲಿ ಇದ್ದವು. ಅತ್ಯುತ್ತಮ ವಿನ್ಯಾಸ, ಕಾರ್ಯಕ್ಷಮತೆ ಹಾಗೂ ಗ್ರಾಹಕ ಸ್ನೇಹಿ ದರವೇ ಅಪಾಚೆ ಶ್ರೇಣಿ ಇಷ್ಟೊಂದು ಫೇಮಸ್​ ಆಗೋಕೆ ಕಾರಣ ಅಂತಾರೆ ಟಿವಿಎಸ್ ಮೋಟಾರ್ ಕಂಪನಿಯ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್. ರಾಧಾಕೃಷ್ಣನ್.

ಟಿವಿಎಸ್ ಅಪಾಚೆ ಸರಣಿಯು ನೇಕೆಡ್​ ಹಾಗೂ ಸೂಪರ್​ ಸ್ಪೋರ್ಟ್ಸ್ ಎಂಬ ಎರಡು ವಿಭಾಗಗಳನ್ನ ಹೊಂದಿದೆ. ಅಪಾಚೆ ಆರ್​ಟಿಆರ್​ 160, 160 4 ವಿ, 180 ಹಾಗೂ 200 4 ವಿ ಸರಣಿಗಳು ನೇಕೆಡ್​ ಬೈಕ್​ ವಿಭಾಗಕ್ಕೆ ಸೇರಿದ್ದಾಗಿವೆ. ಇನ್ನುಳಿದಂತೆ 2017ರಲ್ಲಿ ಲಾಂಚ್​ ಆದ ಟಿವಿಎಸ್​ ಅಪಾಚೆ ಆರ್​ಆರ್​310 ಸೂಪರ್​ ಸ್ಪೋರ್ಟ್ಸ್ ವಿಭಾಗಕ್ಕೆ ಸೇರಿದ್ದಾಗಿದೆ. ಈ ಬೈಕ್​​ ಉತ್ತಮ ರೇಸ್​ ತಂತ್ರಜ್ಞಾನ ಥ್ರೋಟಲ್​ ಬೈ ವೈರ್​ ಟೆಕ್ನಾಲಜಿ,4 ರೈಡ್​ ಮೋಡ್ಸ್ ಸೇರಿದಂತೆ ಇನ್ನೂ ಹಲವು ಅತ್ಯಾಧುನಿಕ ತಂತ್ರಜ್ಞಾನವನ್ನ ಒಳಗೊಂಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...