ವಾಹನಗಳ ಮಾರಾಟ ಉದ್ಯಮದಲ್ಲಿ ತನ್ನದೇ ಆದ ಚಾಪನ್ನ ಮೂಡಿಸಿರೋ ಟಿವಿಎಸ್ ಕಂಪನಿ ಅಂದ್ರೆ ಯಾರಿಗ್ ತಾನೇ ಗೊತ್ತಿಲ್ಲ ಹೇಳಿ. ಗ್ರಾಹಕ ಸ್ನೇಹಿ ದರ, ವಿಶಿಷ್ಟ ವಿನ್ಯಾಸಗಳ ಮೂಲಕ ಪ್ರಚಲಿತದಲ್ಲಿರೋ ಟಿವಿಎಸ್ ಇದೀಗ ಮತ್ತೊಂದು ಸಾಧನೆಯ ಗರಿಯನ್ನ ಮುಡಿಗೇರಿಸಿಕೊಂಡಿದೆ.
ಟಿವಿಎಸ್ ಅನೇಕ ವಿನ್ಯಾಸದ ಬೈಕ್ಗಳನ್ನ ಮಾರುಕಟ್ಟೆಗೆ ಪರಿಚಯಿಸಿದೆ. ಇದರಲ್ಲಿ ಅಪಾಚೆ ಸರಣಿಯ ಬೈಕ್ಗಳು ತುಂಬಾನೇ ಫೇಮಸ್. 2005ರಲ್ಲಿ ಅಪಾಚೆಯ ಮೊದಲ ಸರಣಿಯ ಬೈಕ್ನ್ನ ಟಿವಿಎಸ್ ಮಾರುಕಟ್ಟೆಗೆ ಪರಿಚಯಿಸಿತ್ತು. ಇದೀಗ ಈ ಅಪಾಚೆ ಬೈಕ್ಗಳು ನಾಲ್ಕು ಮಿಲಿಯನ್ ಜಾಗತಿಕ ಮಾರಾಟದ ಮೈಲಿಗಲ್ಲನ್ನ ತಲುಪಿವೆ.
ಹೊಸ ವಿನ್ಯಾಸದ ಮೂಲಕ ಯುವಜನತೆಯನ್ನ ಸೆಳೆಯಬೇಕು ಅಂತಾ ಹೊರಟಿದ್ದ ಟಿವಿಎಸ್ ಸ್ಪೋರ್ಟ್ಸ್ ಬೈಕ್ಗಳ ಮಾದರಿಯಲ್ಲಿ ಅಪಾಚೆ ಬೈಕ್ನ್ನ ವಿನ್ಯಾಸಗೊಳಿಸಿತ್ತು. 160 ಸಿಸಿಯಿಂದ 310 ಸಿಸಿವರೆಗಿನ ಬೈಕ್ಗಳು ಅಪಾಚೆ ಸೀರಿಸ್ನಲ್ಲಿ ಇದ್ದವು. ಅತ್ಯುತ್ತಮ ವಿನ್ಯಾಸ, ಕಾರ್ಯಕ್ಷಮತೆ ಹಾಗೂ ಗ್ರಾಹಕ ಸ್ನೇಹಿ ದರವೇ ಅಪಾಚೆ ಶ್ರೇಣಿ ಇಷ್ಟೊಂದು ಫೇಮಸ್ ಆಗೋಕೆ ಕಾರಣ ಅಂತಾರೆ ಟಿವಿಎಸ್ ಮೋಟಾರ್ ಕಂಪನಿಯ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್. ರಾಧಾಕೃಷ್ಣನ್.
ಟಿವಿಎಸ್ ಅಪಾಚೆ ಸರಣಿಯು ನೇಕೆಡ್ ಹಾಗೂ ಸೂಪರ್ ಸ್ಪೋರ್ಟ್ಸ್ ಎಂಬ ಎರಡು ವಿಭಾಗಗಳನ್ನ ಹೊಂದಿದೆ. ಅಪಾಚೆ ಆರ್ಟಿಆರ್ 160, 160 4 ವಿ, 180 ಹಾಗೂ 200 4 ವಿ ಸರಣಿಗಳು ನೇಕೆಡ್ ಬೈಕ್ ವಿಭಾಗಕ್ಕೆ ಸೇರಿದ್ದಾಗಿವೆ. ಇನ್ನುಳಿದಂತೆ 2017ರಲ್ಲಿ ಲಾಂಚ್ ಆದ ಟಿವಿಎಸ್ ಅಪಾಚೆ ಆರ್ಆರ್310 ಸೂಪರ್ ಸ್ಪೋರ್ಟ್ಸ್ ವಿಭಾಗಕ್ಕೆ ಸೇರಿದ್ದಾಗಿದೆ. ಈ ಬೈಕ್ ಉತ್ತಮ ರೇಸ್ ತಂತ್ರಜ್ಞಾನ ಥ್ರೋಟಲ್ ಬೈ ವೈರ್ ಟೆಕ್ನಾಲಜಿ,4 ರೈಡ್ ಮೋಡ್ಸ್ ಸೇರಿದಂತೆ ಇನ್ನೂ ಹಲವು ಅತ್ಯಾಧುನಿಕ ತಂತ್ರಜ್ಞಾನವನ್ನ ಒಳಗೊಂಡಿದೆ.