ಜೀವ ವಿಮೆ ಪಾಲಿಸಿದಾರರಿಗೆ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ನೆಮ್ಮದಿಯ ಸುದ್ದಿಯೊಂದನ್ನು ನೀಡಿದೆ. ವಿಮೆ ಪಾಲಿಸಿಗಳ ಕಂತು ಪಾವತಿಯ ಗಡುವನ್ನು ವಿಸ್ತರಿಸಲಾಗಿದೆ.
ಮಾರ್ಚ್ ತಿಂಗಳಲ್ಲಿ ಪಾವತಿಸಬೇಕಾಗಿದ್ದ ಜೀವ ವಿಮೆ ಪಾಲಿಸಿಗಳ ಕಂತು ಪಾವತಿಯ ಗಡುವನ್ನು ಈಗ ಮೇ 31ರವರೆಗೆ ವಿಸ್ತರಿಸಲಾಗಿದೆ. ಇದರಿಂದಾಗಿ ಪಾಲಿಸಿದಾರರು ನೆಮ್ಮದಿಯ ನಿಟ್ಟುಸಿರುಬಿಟ್ಟಿದ್ದಾರೆ.
ಕೊರೊನಾ ಮಹಾಮಾರಿಯ ನಿಯಂತ್ರಣಕ್ಕಾಗಿ ಸರ್ಕಾರ ಜಾರಿಗೆ ತಂದಿರುವ ಲಾಕ್ ಡೌನ್ ನಿಂದಾಗಿ ಆರ್ಥಿಕ ವ್ಯವಹಾರ ಸ್ಥಗಿತಗೊಂಡು ಜೀವನ ನಿರ್ವಹಣೆಯೇ ಕಷ್ಟವಾಗಿತ್ತು. ಇಂತಹ ಸಂದರ್ಭದಲ್ಲಿ ಕಂತು ಪಾವತಿಸಲು ಪಾಲಿಸಿದಾರರಿಗೆ ಸಾಧ್ಯವಾಗಿರಲಿಲ್ಲ. ಇದೀಗ ಕಂತು ಪಾವತಿ ಅವಧಿ ವಿಸ್ತರಣೆಯಾಗಿರುವುದರಿಂದ ಕೊಂಚ ನೆಮ್ಮದಿ ಮೂಡಿದೆ.