alex Certify ಜಿಯೋದ ಈ ಪ್ಲಾನ್ ನಲ್ಲಿ ಸಿಗ್ತಿದೆ 100 ಜಿಬಿ ಡೇಟಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಿಯೋದ ಈ ಪ್ಲಾನ್ ನಲ್ಲಿ ಸಿಗ್ತಿದೆ 100 ಜಿಬಿ ಡೇಟಾ

Jio 4

ರಿಲಾಯನ್ಸ್ ಜಿಯೋ ಈ ವಾರ ಗ್ರಾಹಕರಿಗಾಗಿ ಹೊಸ ಪ್ಲಾನ್ ಬಿಡುಗಡೆ ಮಾಡಿದೆ. ಜಿಯೋ ಪೋಸ್ಟ್ ಪೇಯ್ಡ್ ಪ್ಲಸ್ ಯೋಜನೆಯಡಿ ಧನ್ ಧನಾ ಧನ್ ಪ್ಲಾನ್ ಬಿಡುಗಡೆ ಮಾಡಿದೆ. ಇದ್ರ ಪ್ರಾರಂಭಿಕ ಬೆಲೆ 399 ರೂಪಾಯಿಯಾಗಿದ್ದು, 599 ರೂಪಾಯಿಯಲ್ಲಿ ಗ್ರಾಹಕರಿಗೆ ಸಾಕಷ್ಟು ಲಾಭ ಸಿಗ್ತಿದೆ.

599 ರೂಪಾಯಿಗಳ ಜಿಯೋ ಪೋಸ್ಟ್ ಪೇಯ್ಡ್ ಯೋಜನೆಯಲ್ಲಿ ಕಂಪನಿಯು 100 ಜಿಬಿ ಹೈಸ್ಪೀಡ್ ಡೇಟಾವನ್ನು ನೀಡುತ್ತಿದೆ. ಈ ಯೋಜನೆಯಲ್ಲಿ ಗ್ರಾಹಕರು ಅನಿಯಮಿತ ಧ್ವನಿ ಕರೆ ಮತ್ತು ಎಸ್‌ಎಂಎಸ್ ಪಡೆಯಬಹುದು. ಈ ಯೋಜನೆಯು ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ಮತ್ತು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ಗಳ ಉಚಿತ ಚಂದಾದಾರಿಕೆಯನ್ನು ನೀಡಲಿದೆ.  ಜಿಯೋ ಅಪ್ಲಿಕೇಶನ್‌ಗಳ ಚಂದಾದಾರಿಕೆ ಸಹ ಉಚಿತವಾಗಿ ಸಿಗಲಿದೆ.

ಈ ಯೋಜನೆಯು 200 ಜಿಬಿ ವರೆಗೆ ಡೇಟಾ ರೋಲ್‌ಓವರ್ ಮತ್ತು ವೈ-ಫೈ ಕರೆ ಮಾಡುವ ಸೌಲಭ್ಯವನ್ನು ಸಹ ನೀಡುತ್ತಿದೆ. ಜಿಯೋದ ಈ ರೀಚಾರ್ಜ್ ಪ್ಯಾಕ್ ಅಂತರರಾಷ್ಟ್ರೀಯ ರೋಮಿಂಗ್ ಆಫರ್ ಸಹ ನೀಡುತ್ತದೆ.

ಜಿಯೋದ 598 ರೂಪಾಯಿ ರೀಚಾರ್ಜ್ ಪ್ಯಾಕ್‌ನ ಸಿಂಧುತ್ವ 56 ದಿನಗಳು. ಈ ಪ್ಯಾಕ್‌ನಲ್ಲಿ ಪ್ರತಿದಿನ 2 ಜಿಬಿ ಡೇಟಾ ಗ್ರಾಹಕರಿಗೆ ಸಿಗ್ತಿದೆ. ಒಟ್ಟೂ 112 ಜಿಬಿ ಡೇಟಾವನ್ನು ಗ್ರಾಹಕರು ಪಡೆಯುತ್ತಾರೆ. ಜಿಯೋ ನೆಟ್‌ವರ್ಕ್‌ಗೆ ಅನಿಯಮಿತ ಕರೆ ಹಾಗೂ ಬೇರೆ ನೆಟ್‌ವರ್ಕ್‌ಗೆ ಕರೆ ಮಾಡಲು 2000 ನಿಮಿಷಗಳು ಸಿಗಲಿವೆ. ಪ್ರತಿದಿನ 100 ಎಸ್‌ಎಂಎಸ್ ಸಹ ಉಚಿತವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...