![](https://kannadadunia.com/wp-content/uploads/2020/07/smartphone-user_070320035918.jpg)
ಬಿಎಸ್ಎನ್ಎಲ್ ತನ್ನ ಗ್ರಾಹಕರಿಗೆ ಖುಷಿ ಸುದ್ದಿ ನೀಡಿದೆ. 2,399 ರೂಪಾಯಿಗಳ ಹೊಸ ಯೋಜನೆಯನ್ನು ಪರಿಚಯಿಸಿದೆ. ಈ ಯೋಜನೆಯ ಸಿಂಧುತ್ವವು 600 ದಿನವಿರಲಿದೆ. ಈ ಯೋಜನೆ ಬಗ್ಗೆ ಕಂಪನಿ ಗ್ರಾಹಕರಿಗೆ ಮಾಹಿತಿ ನೀಡಿದೆ.
ಚೆನ್ನೈ ಮತ್ತು ತಮಿಳುನಾಡು ವಲಯಗಳಲ್ಲಿ 149 ಮತ್ತು 725 ರೂಪಾಯಿಗಳ ಯೋಜನೆಗಳನ್ನು ಕಂಪನಿ ನಿಲ್ಲಿಸಿದೆ. ಚೆನ್ನೈ ಮತ್ತು ತಮಿಳುನಾಡಿನ ಗ್ರಾಹಕರಿಗೆ ವಸಂತಮ್ ಗೋಲ್ಡ್ ಪಿವಿ 96 ಹೆಸರಿನ 96 ರೂಪಾಯಿ ಪ್ರಿಪೇಯ್ಡ್ ಯೋಜನೆಯನ್ನು ಬಿಎಸ್ಎನ್ಎಲ್ ನಿಲ್ಲಿಸಿದೆ.
ಎರಡೂ ವಲಯಗಳಲ್ಲಿ 2,399 ರೂಪಾಯಿಗಳ ಹೊಸ ಯೋಜನೆಯನ್ನು ಪ್ರಾರಂಭಿಸುವ ಬಗ್ಗೆ ಮಾಹಿತಿ ನೀಡಿದೆ. ಈ ಯೋಜನೆ ಅಂಡಮಾನ್ ಮತ್ತು ನಿಕೋಬಾರ್, ಜಮ್ಮು ಮತ್ತು ಕಾಶ್ಮೀರ ವಲಯವನ್ನು ಹೊರತುಪಡಿಸಿ ಎಲ್ಲಾ ವಲಯಗಳಲ್ಲಿ ಲಭ್ಯವಿದೆ. ಯೋಜನೆಯಲ್ಲಿ ಅನಿಯಮಿತ ಧ್ವನಿ ಕರೆ ಹಾಗೂ 100 ಎಸ್ಎಂಎಸ್ ಲಭ್ಯವಾಗಲಿದೆ. ಇಂಟರ್ನೆಟ್ ಬಳಕೆದಾರರಿಗೆ ಇದ್ರ ಪ್ರಯೋಜನ ಸಿಗುವುದಿಲ್ಲ. ಕರೆ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಕಂಪನಿ ಈ ಯೋಜನೆ ಶುರು ಮಾಡಿದೆ.