alex Certify ಗ್ರಾಹಕರಿಗೆ ಖುಷಿ ಸುದ್ದಿ ನೀಡಿದ ಜಿಯೋ – ಏರ್ಟೆಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗ್ರಾಹಕರಿಗೆ ಖುಷಿ ಸುದ್ದಿ ನೀಡಿದ ಜಿಯೋ – ಏರ್ಟೆಲ್

ದೇಶದಲ್ಲಿ ಲಾಕ್ ಡೌನ್ ಜಾರಿಯಲ್ಲಿದ್ದು, ಅನೇಕರು ಮನೆಯಿಂದಲೇ ಕೆಲಸ ಮಾಡ್ತಿದ್ದಾರೆ. ಹಾಗಾಗಿ ಬ್ರಾಡ್ ಬ್ಯಾಂಡ್ ಸೇವೆಗೆ ಬೇಡಿಕೆ ಹೆಚ್ಚಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡಿರುವ ಟೆಲಿಕಾಂ ಕಂಪನಿಗಳು ಅಗ್ಗದ ಯೋಜನೆಗಳನ್ನು ಗ್ರಾಹಕರಿಗೆ ನೀಡ್ತಿದೆ. ಇದ್ರಲ್ಲಿ ಜಿಯೋ ಹಾಗೂ ಏರ್ಟೆಲ್ ಮುಂದಿದೆ.

99 ರೂಪಾಯಿ ಪ್ಲಾನ್ 7ಏರ್‌ಟೆಲ್ ಬ್ರಾಡ್‌ಬ್ಯಾಂಡ್ ಸರಣಿಯ ಮೂಲ ಯೋಜನೆಯಾಗಿದೆ. ಈ ಯೋಜನೆಯಲ್ಲಿ ಬಳಕೆದಾರರು 100 ಎಂಬಿಪಿಎಸ್ ವೇಗದಲ್ಲಿ 150 ಜಿಬಿ ಡೇಟಾವನ್ನು ಪಡೆಯುತ್ತಾರೆ. ಬಳಕೆದಾರರು ಯಾವುದೇ ನೆಟ್‌ವರ್ಕ್‌ ಗೆ ಅನಿಯಮಿತ ಕರೆ ಮಾಡಬಹುದು.

ಇನ್ನು 999 ರೂಪಾಯಿ ಪ್ಲಾನ್ ಏರ್ಟೆಲ್ ಬ್ರಾಡ್‌ಬ್ಯಾಂಡ್ ಸರಣಿಯ ಮನರಂಜನಾ ಯೋಜನೆಯಾಗಿದೆ. ಈ ಯೋಜನೆಯಲ್ಲಿ ಬಳಕೆದಾರರು 200 ಎಂಬಿಪಿಎಸ್ ವೇಗದಲ್ಲಿ 300 ಜಿಬಿ ಡೇಟಾವನ್ನು ಪಡೆಯುತ್ತಾರೆ. ಬಳಕೆದಾರರು ಯಾವುದೇ ನೆಟ್‌ವರ್ಕ್‌ನಲ್ಲಿ ಅನಿಯಮಿತ ಕರೆ ಮಾಡಲು ಸಾಧ್ಯವಾಗುತ್ತದೆ. ಏರ್‌ಟೆಲ್ ಎಕ್ಸ್ ಟ್ರೀಮ್, ಅಮೆಜಾನ್ ಪ್ರೈಮ್ ಮತ್ತು ಜಿ 5 ಆ್ಯಪ್‌ಗೆ ಪ್ರವೇಶವನ್ನು ನೀಡುತ್ತದೆ.

ಜಿಯೋ ಫೈಬರ್‌ನ 699 ರೂಪಾಯಿ ಯೋಜನೆ ಬಹಳ ವಿಶೇಷವಾಗಿದೆ. ಈ ಯೋಜನೆಯಲ್ಲಿ ಬಳಕೆದಾರರಿಗೆ ಡಬಲ್ ಡೇಟಾ ಕೊಡುಗೆ ಸಿಗುತ್ತದೆ. ಇದಲ್ಲದೆ ಕಂಪನಿಯು 200 ಜಿಬಿಯೊಂದಿಗೆ 50 ಜಿಬಿ ಡೇಟಾವನ್ನು ಬಳಕೆದಾರರಿಗೆ ನೀಡುತ್ತದೆ. ಯಾವುದೇ ನೆಟ್‌ವರ್ಕ್‌ನಲ್ಲಿ ಅನಿಯಮಿತ ಕರೆ ಮಾಡಲು ಸಾಧ್ಯವಾಗುತ್ತದೆ. ಇದ್ರಲ್ಲಿ ಜಿಯೋ ಪ್ರೀಮಿಯಂ ಅಪ್ಲಿಕೇಶನ್‌ಗಳನ್ನು ಬಳಸಲು ಸಾಧ್ಯವಾಗುತ್ತದೆ. ಈ ಪ್ಯಾಕ್‌ನ ಬೆಲೆ 699 ರೂಪಾಯಿ. ಆದರೆ ತೆರಿಗೆ ನಂತರ ಅದರ ಬೆಲೆ 824 ರೂಪಾಯಿ.

ಜಿಯೋದ 849 ಪ್ಲಾನ್ ನಲ್ಲಿ ಬಳಕೆದಾರರು ಡಬಲ್ ಡೇಟಾ ಕೊಡುಗೆಗಳನ್ನು ಪಡೆಯುತ್ತಿದ್ದಾರೆ.  ಕಂಪನಿಯು 400 ಜಿಬಿಯೊಂದಿಗೆ 200 ಜಿಬಿ ಡೇಟಾವನ್ನು ಬಳಕೆದಾರರಿಗೆ ನೀಡುತ್ತದೆ.  ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ಕರೆ ಮಾಡಲು ಸಾಧ್ಯವಾಗುತ್ತದೆ.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...