alex Certify ಗ್ರಾಹಕರಿಗೆ ಖುಷಿ ಸುದ್ದಿ ನೀಡಿದ ಟಾಟಾ ಸ್ಕೈ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗ್ರಾಹಕರಿಗೆ ಖುಷಿ ಸುದ್ದಿ ನೀಡಿದ ಟಾಟಾ ಸ್ಕೈ

ಡಿಟಿಎಚ್ ಆಪರೇಟರ್ ಟಾಟಾ ಸ್ಕೈ ಹೊಸ ಕೊಡುಗೆಯನ್ನು ಪರಿಚಯಿಸಿದೆ. ಇದರ ಅಡಿಯಲ್ಲಿ ಗ್ರಾಹಕರು 2 ತಿಂಗಳ ಉಚಿತ ಸೇವೆಯನ್ನು ಪಡೆಯಬಹುದು. ಟಾಟಾ ಸ್ಕೈ ಖಾತೆಯನ್ನು ರೀಚಾರ್ಜ್ ಮಾಡುವ ಚಂದಾದಾರರಿಗೆ ಮಾತ್ರ ಈ ಕೊಡುಗೆಯ ಲಾಭ ಸಿಗಲಿದೆ.

ಕೆಲ ದಿನಗಳ ಹಿಂದೆ ಟಾಟಾ ಸ್ಕೈ ಕ್ಯಾಶ್‌ಬ್ಯಾಕ್’ ಯೋಜನೆ ನೀಡಿತ್ತು. ಟಾಟಾ ಸ್ಕೈ ಕ್ಯಾಶ್‌ಬ್ಯಾಕ್ ಎಲ್ಲಾ ಬಳಕೆದಾರರಿಗೆ ಲಭ್ಯವಿದೆ. ಆದರೆ ಈ  ಹೊಸ ಕೊಡುಗೆ ಸಿಟಿಬ್ಯಾಂಕ್ ಕಾರ್ಡ್ ಹೊಂದಿರುವವರಿಗೆ ಮಾತ್ರ. ಟಾಟಾ ಸ್ಕೈ ಮೊಬೈಲ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್ ಮೂಲಕ ಈ ಕೊಡುಗೆಯನ್ನು ಪಡೆಯಬಹುದು.

ರೀಚಾರ್ಜ್ ಮಾಡಿದ 7 ದಿನಗಳಲ್ಲಿ ಕ್ಯಾಶ್‌ಬ್ಯಾಕ್ ಮೊತ್ತ ನಿಮ್ಮ ಖಾತೆ ಸೇರಲಿದೆ. ಯಾವುದೇ ಡಿಟಿಎಚ್ ಪ್ಲಾಟ್‌ಫಾರ್ಮ್‌ನಲ್ಲಿ ಲಭ್ಯವಿರದ ಅತ್ಯುತ್ತಮ ದೀರ್ಘಕಾಲೀನ ರೀಚಾರ್ಜ್ ಕೊಡುಗೆ ಇದಾಗಿದೆ. ಸಿಟಿಬ್ಯಾಂಕ್ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಸಿ ಈ ವಹಿವಾಟುಗಳನ್ನು ಮಾಡಬೇಕು. ಗ್ರಾಹಕರು 12 ತಿಂಗಳ ಮೊತ್ತವನ್ನು ಪಾವತಿಸಬೇಕು. ಅದ್ರಲ್ಲಿ ಎರಡು ತಿಂಗಳ ಮೊತ್ತ ಕ್ಯಾಶ್ಬ್ಯಾಕ್ ರೂಪದಲ್ಲಿ ವಾಪಸ್ ಬರಲಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...