ದೇಶದ ಎಲ್ಲ ಭಾಗದ ಗ್ರಾಮೀಣ ಜನರಿಗೆ ಅನುಕೂಲ ಮಾಡಿಕೊಡಲು ಅಂಚೆ ಕಚೇರಿ ಫೈವ್ ಸ್ಟಾರ್ ವಿಲೇಜ್ ಸ್ಕೀಮ್ ಎಂಬ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯಡಿ ಅಂಚೆ ಎಲ್ಲಾ ಐದು ಸೇವೆಗಳನ್ನು ಗ್ರಾಮ ಮಟ್ಟದಲ್ಲಿ ಲಭ್ಯವಾಗಲಿದೆ. ಗ್ರಾಮಸ್ಥರ ಎಲ್ಲ ಸಮಸ್ಯೆ ಬಗೆಹರಿಸಲು ಒನ್ ಸ್ಟಾಪ್ ಶಾಪ್ ರೂಪದಲ್ಲಿ ಇದು ಕಾರ್ಯನಿರ್ವಹಿಸಲಿದೆ.
ಫೈವ್ ಸ್ಟಾರ್ ಯೋಜನೆಯಡಿ, ಉಳಿತಾಯ ಬ್ಯಾಂಕ್ ಖಾತೆಗಳು, ಎನ್.ಎಸ್.ಸಿ.,ಕೆವಿಪಿ ಪ್ರಮಾಣಪತ್ರಗಳು, ಸುಕನ್ಯಾ ಸಮೃದ್ಧಿ ಖಾತೆ, ಪಿಪಿಎಫ್ ಖಾತೆ, ಉಳಿತಾಯ ಖಾತೆ ಇಂಡಿಯಾ ಪೋಸ್ಟ್ ಪಾವತಿ ಬ್ಯಾಂಕ್ ಖಾತೆ, ಅಂಚೆ ಜೀವ ವಿಮಾ ಪಾಲಿಸಿ, ಗ್ರಾಮೀಣ ಅಂಚೆ ಜೀವ ವಿಮಾ ಪಾಲಿಸಿ ಮತ್ತು ಪ್ರಧಾನ್ ಮಂತ್ರಿ ಸುರಕ್ಷಾ ಬಿಮಾ ಯೋಜನೆ ಖಾತೆ, ಪ್ರಧಾನ್ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ ಖಾತೆ ಬರಲಿದೆ.
ಯೋಜನೆಯನ್ನು ಉದ್ಘಾಟಿಸಿದ ಕೇಂದ್ರ ಸಂವಹನ ರಾಜ್ಯ ಸಚಿವ ಸಂಜಯ್ ಧೋತ್ರೆ, ಈ ಯೋಜನೆಯನ್ನು ಪ್ರಾಥಮಿಕವಾಗಿ ಮಹಾರಾಷ್ಟ್ರದಲ್ಲಿ ಪ್ರಾರಂಭಿಸಲಾಗುತ್ತಿದೆ ಎಂದು ಹೇಳಿದ್ದಾರೆ. ಇಲ್ಲಿನ ಅನುಭವದ ಆಧಾರದ ಮೇಲೆ ಇದನ್ನು ದೇಶಾದ್ಯಂತ ಜಾರಿಗೆ ತರಲಾಗುವುದು. ಪೋಸ್ಟ್ ಮ್ಯಾನ್ ಮತ್ತು ಅಂಚೆ ಇಲಾಖೆ, ಸಾಮಾನ್ಯ ನಾಗರಿಕರ ಜೀವನದ ಒಂದು ಪ್ರಮುಖ ಭಾಗವಾಗಿದೆ.
ಅಂಚೆ ಕಚೇರಿಯ ಎನ್‌ಎಸ್‌ಸಿ ಯೋಜನೆಯಲ್ಲಿ ವಾರ್ಷಿಕ ಶೇಕಡಾ 6.8 ರಷ್ಟು ದರದಲ್ಲಿ ಬಡ್ಡಿ ಪಾವತಿಸಲಾಗುತ್ತಿದೆ. ಈ ಯೋಜನೆಯ ಅಧಿಕಾರಾವಧಿ 5 ವರ್ಷಗಳು. ಐದು ವರ್ಷ ಮುಗಿದ ನಂತ್ರವೂ ಇದನ್ನು ಇನ್ನೂ 5 ವರ್ಷಗಳವರೆಗೆ ವಿಸ್ತರಿಸಬಹುದು.
ಐದು ಗ್ರಾಮೀಣ ಡಾಕ್ ಸೇವಕರ ತಂಡವು ಇದನ್ನು ಕಾರ್ಯಗತಗೊಳಿಸುತ್ತದೆ. ಈ ತಂಡದ ನೇತೃತ್ವವನ್ನು ಸಂಬಂಧಪಟ್ಟ ಶಾಖಾ ಕಚೇರಿಯ ಶಾಖಾ ಪೋಸ್ಟ್ ಮಾಸ್ಟರ್ ವಹಿಸಲಿದ್ದಾರೆ. ಅಂಚೆ ಇನ್ಸ್‌ಪೆಕ್ಟರ್ ಪ್ರತಿದಿನ ತಂಡದ ಪ್ರಗತಿಯನ್ನು ವೈಯಕ್ತಿಕವಾಗಿ ಮೇಲ್ವಿಚಾರಣೆ ಮಾಡುತ್ತಾರೆ. ಮನೆ-ಮನೆಗೆ ಹೋಗಿ ಜಾಗೃತಿ ಅಭಿಯಾನವನ್ನು ನಡೆಸಲಾಗುವುದು.
ಶಾಖಾ ಕಚೇರಿಯ ನೋಟಿಸ್ ಬೋರ್ಡ್‌ನಲ್ಲಿ ಮಾಹಿತಿಯನ್ನು ಹಾಕುವ ಮೂಲಕ ವ್ಯಾಪಕ ಪ್ರಚಾರ ಮಾಡಲಾಗುವುದು. ಉದ್ದೇಶಿತ ಗ್ರಾಮಗಳ ಪ್ರಮುಖ ಸ್ಥಳಗಳಾದ ಪಂಚಾಯತ್ ಕಚೇರಿಗಳು, ಶಾಲೆಗಳು, ಗ್ರಾಮೀಣ ಷಧಾಲಯಗಳು, ಬಸ್ ಡಿಪೋಗಳು, ಮಾರುಕಟ್ಟೆಗಳು ಸಹ ಜಾಹೀರಾತುಗಳಿಗೆ ಬಳಸಲ್ಪಡುತ್ತವೆ ಮತ್ತು ಕರಪತ್ರಗಳನ್ನು ವಿತರಿಸಲಾಗುವುದು. ಕೋವಿಡ್ -19 ಸುರಕ್ಷತಾ ಮಾರ್ಗಸೂಚಿಗಳನ್ನು ಗಮನದಲ್ಲಿಟ್ಟುಕೊಂಡು ಸಣ್ಣ ಮೇಳಗಳನ್ನು ಆಯೋಜಿಸಲಾಗುವುದು.