alex Certify ಕೊರೊನಾ ಎಫೆಕ್ಟ್: ಕೆಲಸ ಕಳೆದುಕೊಂಡ 1100 ಮಂದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಎಫೆಕ್ಟ್: ಕೆಲಸ ಕಳೆದುಕೊಂಡ 1100 ಮಂದಿ

ಇಡೀ ವಿಶ್ವಕ್ಕೆ ಕಂಟಕಪ್ರಾಯವಾಗಿ ಪರಿಣಮಿಸಿರುವ ಮಾರಕ ಕೊರೊನಾ ವೈರಸ್ ಜನಜೀವನವನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಬಹುತೇಕ ಎಲ್ಲ ರಾಷ್ಟ್ರಗಳು ಲಾಕ್ ಡೌನ್ ಜಾರಿಗೊಳಿಸಿದ್ದು, ಇದರ ಪರಿಣಾಮ ಅನೇಕರು ಕೆಲಸ ಕಳೆದುಕೊಳ್ಳುವಂತಾಗಿದೆ.

ಇದೀಗ ಬೆಂಗಳೂರು ಮೂಲದ ಫುಡ್ ಡೆಲಿವರಿ ಕಂಪನಿ ಸ್ವಿಗ್ಗಿ, ಭವಿಷ್ಯದ ಅನಿಶ್ಚಿತತೆಗಳ ನಡುವೆ ಕಂಪನಿಯನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಕಾರಣಕ್ಕೆ ತನ್ನ 1100 ಮಂದಿ ಉದ್ಯೋಗಿಗಳನ್ನು ಮನೆಗೆ ಕಳುಹಿಸಿದೆ.

ಕೆಲಸ ಕಳೆದುಕೊಂಡಿರುವ ಉದ್ಯೋಗಿಗಳಿಗೆ ಕನಿಷ್ಠ ಮೂರು ತಿಂಗಳು ಹಾಗೂ ಕೆಲವರ ಸೇವಾವಧಿಯನ್ನು ಪರಿಗಣಿಸಿ ಗರಿಷ್ಠ ಎಂಟು ತಿಂಗಳವರೆಗಿನ ವೇತನವನ್ನು ನೀಡುವುದಾಗಿ ಸ್ವಿಗ್ಗಿ ಕಂಪನಿ ಹೇಳಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...