ನವದೆಹಲಿ: ಕೊರೊನಾ ಸೋಂಕಿಗೆ ರಾಮಬಾಣವಾಗಿ ಇದೀಗ ಪತಂಜಲಿ ಸಂಸ್ಥೆಯಿಂದಲೂ ಔಷಧ ಸಿದ್ಧವಾಗಿದ್ದು, ಕೊರೊನಿಲ್ ಎಂಬ ಔಷಧವನ್ನು ಯೋಗಗುರು ಬಾಬಾ ರಾಮ್ ದೇವ್ ಬಿಡುಗಡೆಗೊಳಿಸಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಾಬಾ ರಾಮ್ ದೇವ್, ಕೊರೊನಾ ಸೋಂಕಿಗೆ ಪತಂಜಲಿ ಸಂಸ್ಥೆಯಿಂದ ವೈಜ್ಞಾನಿಕ ಸಂಶೋಧನೆ ಮೂಲಕ ಕೊರೊನಿಲ್ ಎಂಬ ಔಷಧ ಅಭಿವೃದ್ಧಿಪಡಿಸಲಾಗಿದೆ. ಇದು ಮೊದಲ ಸಾಕ್ಷ್ಯ ಆಧಾರಿತ ಕೊರೊನಾ ಔಷಧವಾಗಿದೆ ಎಂದರು.
ಯುವಕ ಮಾಡಿದ ಐಡಿಯಾಗೆ ತಲೆದೂಗಿದ ಆನಂದ್ ಮಹೀಂದ್ರ
ಕೊರೊನಾ ಔಷಧದಿಂದ 158 ದೇಶಗಳಿಗೆ ಅನುಕೂಲವಾಗಲಿದೆ ಎಂದ ಅವರು, ಕೊರೊನಿಲ್ ಔಷಧದ ಮೇಲೆ ವಿಜ್ಞಾನಿಗಳು ನಡೆಸಿರುವ ಸಂಶೋಧನೆಯ ಪ್ರತಿಯನ್ನು ಕೂಡ ಬಿಡುಗಡೆ ಮಾಡಿದ್ದಾರೆ.