alex Certify ಕವರ್ ಮೇಲೆ ದೇವರ ಚಿತ್ರ: ಭಾರಿ ವಿರೋಧ ವ್ಯಕ್ತವಾಗುತ್ತಿದ್ದಂತೆ ಕ್ಷಮೆಯಾಚಿಸಿದ ‘ಕಿಟ್ ಕ್ಯಾಟ್’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕವರ್ ಮೇಲೆ ದೇವರ ಚಿತ್ರ: ಭಾರಿ ವಿರೋಧ ವ್ಯಕ್ತವಾಗುತ್ತಿದ್ದಂತೆ ಕ್ಷಮೆಯಾಚಿಸಿದ ‘ಕಿಟ್ ಕ್ಯಾಟ್’

ನೆಸ್ಲೆ ಕಂಪನಿಯ ಪ್ರಸಿದ್ಧ ಉತ್ಪನ್ನಗಳಲ್ಲಿ ಒಂದಾದ ಕಿಟ್​ಕ್ಯಾಟ್​​ ಬಗ್ಗೆ ನಿಮಗೆ ತಿಳಿದೇ ಇರಬಹುದು. ಆದರೆ ಇದೀಗ ಕಿಟ್​ಕ್ಯಾಟ್​​ ತನ್ನ ವ್ರ್ಯಾಪರ್​ ವಿನ್ಯಾಸದ ಮೂಲಕ ಸೋಶಿಯಲ್​ ಮೀಡಿಯಾದಲ್ಲಿ ವ್ಯಾಪಕ ವಿರೋಧವನ್ನು ಸಂಪಾದಿಸಿದೆ.

ಎಫ್​ಎಂಸಿಜಿ ಕಂಪನಿಯು ಪ್ರಚಾರದ ಗಿಮಿಕ್​ಗಾಗಿ ಕಿಟ್​ಕ್ಯಾಟ್​ ವ್ರ್ಯಾಪರ್​ಗಳ ಮೇಲೆ ಭಗವಾನ್​ ಜಗನ್ನಾಥ, ಬಲಭದ್ರೆ ಹಾಗೂ ಸುಭದ್ರರ ಚಿತ್ರಗಳನ್ನು ಹಾಕಿದೆ. ಆದರೆ, ಈ ಪ್ರಚಾರದ ಗಿಮಿಕ್​ ಕಂಪನಿಗೆ ಉಲ್ಟಾ ಹೊಡೆದಿದೆ. ನೆಟ್ಟಿಗರು ಸೋಶಿಯಲ್​ ಮೀಡಿಯಾದಲ್ಲಿ ಆಕ್ರೋಶ ಹೊರಹಾಕಿದ್ದಾರೆ.

ಟ್ವಿಟರ್​ ಬಳಕೆದಾರರೊಬ್ಬರು ದಯಮಾಡಿ ಕಿಟ್​ಕ್ಯಾಟ್​ ವ್ರ್ಯಾಪರ್​ನ ಮೇಲಿರುವ ಜಗನ್ನಾಥ, ಬಲಭದ್ರೆ ಹಾಗೂ ಮಾತಾ ಸುಭದ್ರರ ಫೋಟೋವನ್ನು ತೆಗೆದು ಹಾಕಬೇಕು. ಪ್ರತಿಯೊಬ್ಬರೂ ಚಾಕಲೇಟ್​ ತಿಂದ ಬಳಿಕ ಅದರ ಕವರ್​ನ್ನು ಕಸದ ಬುಟ್ಟಿಗೆ ಎಸೆಯುತ್ತಾರೆ. ಕೆಲವರು ರಸ್ತೆಗಳ ಮೇಲೂ ಬಿಸಾಡುತ್ತಾರೆ. ಹೀಗಾಗಿ ಈ ಫೋಟೋಗಳನ್ನು ದಯವಿಟ್ಟು ತೆಗೆದು ಹಾಕಿ ಎಂದು ಬರೆದಿದ್ದಾರೆ.

ನಮ್ಮ ಓಡಿಶಾದ ಸಂಸ್ಕೃತಿ, ಜಗನ್ನಾಥ ದೇವರು, ಬಲಭದ್ರ ಹಾಗೂ ಸುಭದ್ರರ ಫೋಟೋಗಳನ್ನು ಕಿಟ್​ಕ್ಯಾಟ್​ ಮೇಳೆ ನೋಡುವುದು ನಿಜಕ್ಕೂ ಸಂತೋಷಕರ ವಿಚಾರವೇ. ಆದರೆ ಯಾರಾದರೂ ಚಾಕಲೇಟ್​​ ತಿಂದಮೇಲೆ ಅದರ ವ್ರ್ಯಾಪರ್​ನ್ನು ಕಸದತೊಟ್ಟಿ, ಚರಂಡಿ,ರಸ್ತೆಗಳಲ್ಲಿ ಬಿಸಾಡುತ್ತಾರೆ. ಕೆಲವರು ಇದರ ಮೇಲೆಯೇ ನಡೆದಾಡುತ್ತಾರೆ. ಜಗನ್ನಾಥನ ಕುಟುಂಬಕ್ಕೆ ಇದರಿಂದ ಸಂತಸವಾಗುತ್ತದೆ ಎಂದು ಮತ್ತೊಬ್ಬರು ಟ್ವೀಟಾಯಿಸಿದ್ದಾರೆ.

ಸೋಶಿಯಲ್​ ಮೀಡಿಯಾದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ಎಫ್​ಎಂಸಿಜಿ ಕ್ಷಮೆಯಾಚಿಸಿದೆ ಹಾಗೂ ಜನರ ಭಾವನೆಗಳಿಗೆ ಧಕ್ಕೆ ತರುವ ವಿಚಾರ ನಮ್ಮದಾಗಿರಲಿಲ್ಲ ಎಂದು ಹೇಳಿದೆ.

— Sanjeeb Kumar Shaw (@sanjeebshaw1) January 16, 2022

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...