
ಎಫ್ಎಂಸಿಜಿ ಕಂಪನಿಯು ಪ್ರಚಾರದ ಗಿಮಿಕ್ಗಾಗಿ ಕಿಟ್ಕ್ಯಾಟ್ ವ್ರ್ಯಾಪರ್ಗಳ ಮೇಲೆ ಭಗವಾನ್ ಜಗನ್ನಾಥ, ಬಲಭದ್ರೆ ಹಾಗೂ ಸುಭದ್ರರ ಚಿತ್ರಗಳನ್ನು ಹಾಕಿದೆ. ಆದರೆ, ಈ ಪ್ರಚಾರದ ಗಿಮಿಕ್ ಕಂಪನಿಗೆ ಉಲ್ಟಾ ಹೊಡೆದಿದೆ. ನೆಟ್ಟಿಗರು ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ಹೊರಹಾಕಿದ್ದಾರೆ.
ಟ್ವಿಟರ್ ಬಳಕೆದಾರರೊಬ್ಬರು ದಯಮಾಡಿ ಕಿಟ್ಕ್ಯಾಟ್ ವ್ರ್ಯಾಪರ್ನ ಮೇಲಿರುವ ಜಗನ್ನಾಥ, ಬಲಭದ್ರೆ ಹಾಗೂ ಮಾತಾ ಸುಭದ್ರರ ಫೋಟೋವನ್ನು ತೆಗೆದು ಹಾಕಬೇಕು. ಪ್ರತಿಯೊಬ್ಬರೂ ಚಾಕಲೇಟ್ ತಿಂದ ಬಳಿಕ ಅದರ ಕವರ್ನ್ನು ಕಸದ ಬುಟ್ಟಿಗೆ ಎಸೆಯುತ್ತಾರೆ. ಕೆಲವರು ರಸ್ತೆಗಳ ಮೇಲೂ ಬಿಸಾಡುತ್ತಾರೆ. ಹೀಗಾಗಿ ಈ ಫೋಟೋಗಳನ್ನು ದಯವಿಟ್ಟು ತೆಗೆದು ಹಾಕಿ ಎಂದು ಬರೆದಿದ್ದಾರೆ.
ನಮ್ಮ ಓಡಿಶಾದ ಸಂಸ್ಕೃತಿ, ಜಗನ್ನಾಥ ದೇವರು, ಬಲಭದ್ರ ಹಾಗೂ ಸುಭದ್ರರ ಫೋಟೋಗಳನ್ನು ಕಿಟ್ಕ್ಯಾಟ್ ಮೇಳೆ ನೋಡುವುದು ನಿಜಕ್ಕೂ ಸಂತೋಷಕರ ವಿಚಾರವೇ. ಆದರೆ ಯಾರಾದರೂ ಚಾಕಲೇಟ್ ತಿಂದಮೇಲೆ ಅದರ ವ್ರ್ಯಾಪರ್ನ್ನು ಕಸದತೊಟ್ಟಿ, ಚರಂಡಿ,ರಸ್ತೆಗಳಲ್ಲಿ ಬಿಸಾಡುತ್ತಾರೆ. ಕೆಲವರು ಇದರ ಮೇಲೆಯೇ ನಡೆದಾಡುತ್ತಾರೆ. ಜಗನ್ನಾಥನ ಕುಟುಂಬಕ್ಕೆ ಇದರಿಂದ ಸಂತಸವಾಗುತ್ತದೆ ಎಂದು ಮತ್ತೊಬ್ಬರು ಟ್ವೀಟಾಯಿಸಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ಎಫ್ಎಂಸಿಜಿ ಕ್ಷಮೆಯಾಚಿಸಿದೆ ಹಾಗೂ ಜನರ ಭಾವನೆಗಳಿಗೆ ಧಕ್ಕೆ ತರುವ ವಿಚಾರ ನಮ್ಮದಾಗಿರಲಿಲ್ಲ ಎಂದು ಹೇಳಿದೆ.