alex Certify ಉಚಿತ ಗ್ಯಾಸ್ ಸಿಲಿಂಡರ್ ಪಡೆಯಲು ಇಲ್ಲಿದೆ ಸುಲಭ ವಿಧಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉಚಿತ ಗ್ಯಾಸ್ ಸಿಲಿಂಡರ್ ಪಡೆಯಲು ಇಲ್ಲಿದೆ ಸುಲಭ ವಿಧಾನ

ನವದೆಹಲಿ: ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಕೇಂದ್ರ ಸರ್ಕಾರ ನೀಡುತ್ತಿರುವ ಉಚಿತ ಎಲ್ ಪಿ ಜಿ ಸಿಲಿಂಡರ್ ಸಂಪರ್ಕ ಪಡೆಯಲು ಸೆ.30 ಕೊನೆ ದಿನವಾಗಿದ್ದು, ಇನ್ನು 7 ದಿನಗಳು ಮಾತ್ರ ಬಾಕಿಯಿದೆ. ಅರ್ಹ ಫಲಾನುಭವಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಏಪ್ರಿಲ್ 30ಕ್ಕೆ ಅಂತ್ಯವಾಗುತ್ತಿದ್ದ ಈ ಯೋಜನೆಯನ್ನು ಕೊರೊನಾ ಲಾಕ್ ಡೌನ್ ಹಿನ್ನಲೆಯಲ್ಲಿ ಬಡವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಸೆ.30ರವರೆಗೆ ವಿಸ್ತರಿಸಿತ್ತು. ಇದೀಗ ಪರಿಷ್ಕೃತ ಕೊನೆ ದಿನಾಂಕ ಸಮೀಪಿಸಿದ್ದು, ಯೋಜನೆಯ ಫಲಾನುಭವಿಗಳು ವಾರದೊಳಗಾಗಿ ಅರ್ಜಿ ಸಲ್ಲಿಸಿ ಯೋಜನೆಯ ಲಾಭ ಪಡೆದುಕೊಳ್ಳಬಹುದು.

ಯಾರಿಗೆ ಸಿಗಲಿದೆ ಯೋಜನೆಯ ಲಾಭ:

ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬದ 18 ವರ್ಷ ಮೇಲ್ಪಟ್ಟ ಮಹಿಳೆಗೆ ಈ ಯೋಜನೆಯ ಲಾಭ ಸಿಗಲಿದೆ. ಅರ್ಜಿದಾರರ ಹೆಸರಲ್ಲಿ ಅಥವಾ ಅವರ ಕುಟುಂಬದವರ ಹೆಸರಲ್ಲಿ ಈ ಹಿಂದೆ ಯಾವುದೇ ಎಲ್ ಪಿ ಜಿ ಸಂಪರ್ಕವನ್ನು ಹೊಂದಿರಬಾರದು.

ಅರ್ಜಿ ಸಲ್ಲಿಸಲು ಜನಧನ್ ಬ್ಯಾಂಕ್ ಖಾತೆ ಸಂಖ್ಯೆ, ಆಧಾರ್ ಕಾರ್ಡ್, ಮೊಬೈಲ್ ನಂಬರ್, ಪಾಸ್ ಪೋರ್ಟ್ ಗಾತ್ರದ ಫೋಟೋ, ಬಿಪಿಎಲ್ ಕಾರ್ಡ್ ನಲ್ಲಿ ಹೆಸರಿನ ಮುದ್ರಣ, ಪಡಿತರ ಚೀಟಿಯ ಫೋಟೋ ಅಗತ್ಯವಾಗಿರುತ್ತದೆ.

ಈ ದಾಖಲೆಗಳು ನಿಮ್ಮಲ್ಲಿದ್ದರೆ ನೀವು ಮಾಡಬೇಕಾಗಿದ್ದು ಇಷ್ಟು:

* ಪ್ರಧಾನಮಂತ್ರಿ ಉಜ್ವಲ ಯೋಜನೆಯ ಅಧಿಕೃತ ವೆಬ್ ಸೈಟ್ pmujjwalayojana.comಗೆ ಹೋಗಿ ಅರ್ಜಿ ನಮೂನೆಯನ್ನು ಡೌನ್ ಲೋಡ್ ಮಾಡಿಕೊಳ್ಳಿ.

* ಅರ್ಜಿಯಲ್ಲಿ ಕೇಳಿದ ಸಂಪೂರ್ಣ ಮಾಹಿತಿಗಳನ್ನು ಭರ್ತಿ ಮಾಡಿ. ಹೀಗೆ ಭರ್ತಿ ಮಾಡಿದ ಅರ್ಜಿಯನ್ನು ಎಲ್ ಪಿ ಜಿ ಕೇಂದ್ರದಲ್ಲಿ ಸಲ್ಲಿಸಿ.

* ಅರ್ಜಿಯ ಜೊತೆಗೆ ಅಗತ್ಯ ಎಲ್ಲಾ ದಾಖಲೆಗಳನ್ನು ಸಲ್ಲಿಸಿರಬೇಕು. ದಾಖಲೆಗಳ ಪರಿಶೀಲನೆ ಬಳಿಕ ಅರ್ಹ ಅರ್ಜಿದಾರರಿಗೆ ಉಚಿತ ಗ್ಯಾಸ್ ಸಂಪರ್ಕವನ್ನು ಕಲ್ಪಿಸಲಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...