ಸಾಮಾಜಿಕ ಜಾಲತಾಣಗಳ ಮೇಲೆ ಬಳಕೆದಾರರು ಎಷ್ಟರಮಟ್ಟಿಗೆ ಅವಲಂಬಿತರಾಗಿದ್ದಾರೆ ಎಂದರೆ ಒಂದು ಕ್ಷಣ ಮಿಸ್ಸಾದರೂ ಚಡಪಡಿಸಿ ಹೋಗುತ್ತಾರೆ. ಅಂತದ್ದರಲ್ಲಿ ಶುಕ್ರವಾರ ರಾತ್ರಿ 45 ನಿಮಿಷಗಳ ಕಾಲ ವಾಟ್ಸಾಪ್ ಮತ್ತು ಇನ್ಸ್ಟಾಗ್ರಾಂ ಬಳಕೆದಾರರು ತಾಂತ್ರಿಕ ದೋಷದ ಕಾರಣಕ್ಕೆ ಸಮಸ್ಯೆ ಎದುರಿಸಿದ್ದು, ಈ ಕುರಿತು ಟ್ವಿಟ್ಟರ್ನಲ್ಲಿ ಟ್ವೀಟ್ ಗಳ ಸುರಿಮಳೆಯೇ ಹರಿದಿತ್ತು.
ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಶುಕ್ರವಾರ ವಾಟ್ಸಾಪ್ ಮತ್ತು ಇನ್ಸ್ಟಾಗ್ರಾಮ್ ನಲ್ಲಿ ಸಮಸ್ಯೆ ತಲೆದೋರಿದ್ದು, ಗ್ರಾಹಕರು ಸಂದೇಶ ಕಳುಹಿಸಲು ಮತ್ತು ಸ್ವೀಕರಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಟ್ವಿಟರ್ನಲ್ಲಿ ಹ್ಯಾಷ್ ಟ್ಯಾಗ್ ನಡಿ ಟ್ರೆಂಡ್ ಮಾಡಿದ ಬಳಕೆದಾರರು ತಮಗಾದ ತೊಂದರೆಗಳನ್ನು ಹೇಳಿಕೊಂಡಿದ್ದರು.
ಇದೀಗ ಫೇಸ್ಬುಕ್, ಬಳಕೆದಾರರ ಕ್ಷಮೆ ಯಾಚಿಸಿದ್ದು, ತಾಂತ್ರಿಕ ದೋಷದ ಕಾರಣಕ್ಕೆ ವಾಟ್ಸಾಪ್ ಮತ್ತು ಇನ್ಸ್ಟಾಗ್ರಾಂ ನಲ್ಲಿ ಸಮಸ್ಯೆ ತಲೆದೋರಿತ್ತು ಎಂದು ತಿಳಿಸಿದೆ. ಇದೀಗ ಸಮಸ್ಯೆಯನ್ನು ಸರಿ ಪಡಿಸಿರುವುದಾಗಿ ಫೇಸ್ಬುಕ್ ತಿಳಿಸಿದೆ. ವಾಟ್ಸಾಪ್ ಮತ್ತು ಇನ್ಸ್ಟಾಗ್ರಾಮ್ ಒಡೆತನವನ್ನು ಫೇಸ್ಬುಕ್ ಹೊಂದಿದ್ದು, ಹೀಗಾಗಿ ಬಳಕೆದಾರರ ಕ್ಷಮೆ ಯಾಚನೆಗೆ ಮುಂದಾಗಿದೆ.
ಟ್ವಿಟರ್ನಲ್ಲಿ ಟ್ರೆಂಡ್ ಸೆಟ್ ಮಾಡಿದ ಲಾಕ್ಡೌನ್ 2021: ಇಲ್ಲಿದೆ ನೋಡಿ ತಮಾಷೆಯ ಮೀಮ್ಸ್..!