alex Certify ಈ ಆಪ್ ನಲ್ಲಿನ ನ್ಯೂನ್ಯತೆ ಪತ್ತೆ ಹಚ್ಚಿದವರಿಗೆ ಸಿಗಲಿದೆ ಭಾರೀ ಬಹುಮಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಆಪ್ ನಲ್ಲಿನ ನ್ಯೂನ್ಯತೆ ಪತ್ತೆ ಹಚ್ಚಿದವರಿಗೆ ಸಿಗಲಿದೆ ಭಾರೀ ಬಹುಮಾನ

ಕೊರೊನಾ ಸೋಂಕು ಶರವೇಗದಲ್ಲಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸೋಂಕಿತರನ್ನು ಕಂಡು ಹಿಡಿಯುವುದು ಕಷ್ಟವಾಗುತ್ತದೆ ಎಂಬ ನಿಟ್ಟಿನಲ್ಲಿ ಹಲವಾರು ಮಾರ್ಗಗಳನ್ನು ಸರ್ಕಾರ ಕಂಡುಕೊಂಡಿದೆ. ಇದರ ಮತ್ತೊಂದು ಮಹತ್ವದ ಭಾಗ ಅಂದರೆ ಆರೋಗ್ಯ ಸೇತು ಆಪ್. ಈ ಆಪ್‌ನ ಅಭಿವೃದ್ಧಿಪಡಿಸಿ ಎಲ್ಲರೂ ಇದನ್ನು ಉಪಯೋಗಿಸುವಂತೆ ಸರ್ಕಾರ ಸೂಚಿಸಿದೆ. ಈ ಆಪ್ ಮೂಲಕ ತಮ್ಮನ್ನು ತಾವು ಪರೀಕ್ಷೆಗೆ ಒಳಪಡಿಸಿಕೊಳ್ಳಬಹುದಾಗಿದೆ.

ಆದರೆ ಈ ಆಪ್ ವೈಯಕ್ತಿಕ ಮಾಹಿತಿಯನ್ನು ಕಲೆ ಹಾಕಲಿದೆ. ಇದರಿಂದ ವ್ಯಕ್ತಿಯ ವೈಯಕ್ತಿಕ ಮಾಹಿತಿ ಸೋರಿಕೆಯಾಗುತ್ತದೆ ಎಂದು ಹಲವಾರು ಮಂದಿ ಆತಂಕ ವ್ಯಕ್ತಪಡಿಸುತ್ತಿದ್ದರು. ಅಲ್ಲದೆ ಸೇತು ಆಪ್‌ನ ಸುರಕ್ಷತೆಯ ಕುರಿತು ಅನೇಕ ತಜ್ಞರು ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ.

ಹೀಗಾಗಿ ಸರ್ಕಾರ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಈ ಆಪ್‌ನ ದೋಷಗಳು, ನ್ಯೂನ್ಯತೆಗಳು ಮತ್ತು ಉತ್ತಮ ಸಂಕೇತಗಳನ್ನು ತೋರಿಸುವವರಿಗೆ ನಗದು ಬಹುಮಾನ ನೀಡಲು ಮುಂದಾಗಿದೆ. ಈ ಮೂಲಕ ಆಪ್ ಎಷ್ಟು ಸುರಕ್ಷಿತವಾಗಿದೆ ಎಂಬುದನ್ನು ತೋರಿಸಲು ಪ್ರಯತ್ನಿಸುತ್ತಿದೆ.

ಈ ಅಪ್ಲಿಕೇಶನ್ ಅನ್ನು ಸುಧಾರಿಸಲು ಬಗ್ ಬೌಂಟಿ ಕಾರ್ಯಕ್ರಮ ಪ್ರಾರಂಭಿಸಲಾಗಿದೆ. ಈ ಅಪ್ಲಿಕೇಶನ್‌ನಲ್ಲಿ ಏನಾದರೂ ದೋಷ ಕಂಡು ಬಂದರೆ ಅಥವಾ ಯಾವುದೇ ಭದ್ರತಾ ನ್ಯೂನ್ಯತೆಗಳಿದ್ದು ಅದನ್ನು ಪತ್ತೆ ಹಚ್ಚಿದವರಿಗೆ 3 ಲಕ್ಷ ರೂಪಾಯಿಗಳವರೆಗೆ ನಗದು ಬಹುಮಾನ ನೀಡಲಾಗುತ್ತಿದೆ. ಈ ಪ್ರಕ್ರಿಯೆ ಮೇ 27 ರಿಂದ ಪ್ರಾರಂಭವಾಗಿ ಜೂನ್ 29 ರವರೆಗೆ ನಡೆಯಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...