ಬೆಲೆ ಏರುಮುಖವಾಗಿದ್ದ ಕಾರಣ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿಸಿದ್ದ ಈರುಳ್ಳಿ ಬೆಲೆ ದಿಢೀರ್ ಕುಸಿತ ಕಂಡಿದೆ. ಕೆಲ ದಿನಗಳ ಹಿಂದೆ ಕೆಜಿಗೆ 40 ರೂ. ಇದ್ದ ದರ ಈಗ 10ರಿಂದ 15 ರೂಪಾಯಿಗೆ ಕುಸಿತ ಕಂಡಿದ್ದು, ಬೆಳೆಗಾರರು ಕಂಗಾಲಾಗಿದ್ದಾರೆ.
ಈ ಮೊದಲು ಅತಿಯಾದ ಮಳೆ ಸುರಿದ ಕಾರಣ ಉತ್ತರ ಕರ್ನಾಟಕದಲ್ಲಿ ಈರುಳ್ಳಿ ಬೆಲೆ ಕಡಿಮೆ ಪ್ರಮಾಣದಲ್ಲಿ ಬಂದಿತ್ತು. ಹೀಗಾಗಿ ಹೊರರಾಜ್ಯಗಳಿಂದ ಈರುಳ್ಳಿ ತರಿಸಿಕೊಳ್ಳಲಾಗುತ್ತಿತ್ತು. ಮಾರುಕಟ್ಟೆಯಲ್ಲಿ ದಾಸ್ತಾನು ಕಡಿಮೆ ಇದ್ದ ಕಾರಣ ಸಹಜವಾಗಿಯೇ ಬೆಲೆ ಏರಿಕೆ ಕಂಡಿತ್ತು.
ಈ ಗ್ರಾಮದಲ್ಲಿ ಹುಡುಗಿಯರು ಜೀನ್ಸ್ – ಹುಡುಗರು ಶಾರ್ಟ್ಸ್ ಧರಿಸುವಂತಿಲ್ಲ…!
ಇದೀಗ ಈರುಳ್ಳಿ ಬೆಳೆಯುವ ಪ್ರಮುಖ ಜಿಲ್ಲೆಗಳಾದ ಬಾಗಲಕೋಟೆ, ಗುಲ್ಬರ್ಗ ಬೆಳಗಾವಿ ಮೊದಲಾದ ಕಡೆ ಒಳ್ಳೆಯ ಫಸಲು ಬಂದಿದ್ದು, ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ದಾಸ್ತಾನು ಬರುತ್ತಿದೆ. ಜೊತೆಗೆ ಹೊರರಾಜ್ಯಗಳಿಂದಲೂ ಈರುಳ್ಳಿ ಬರುತ್ತಿರುವ ಕಾರಣ ಬೆಲೆ ಕುಸಿತವಾಗಲು ಕಾರಣವಾಗಿದೆ ಎಂಬ ಮಾತುಗಳು ವರ್ತಕ ವಲಯದಲ್ಲಿ ಕೇಳಿಬರುತ್ತಿದೆ.