ಹಬ್ಬಗಳ ತಿಂಗಳು ಅಕ್ಟೋಬರ್ ಶುರುವಾಗ್ತಿದೆ. ಅಕ್ಟೋಬರ್‌ನಲ್ಲಿ ಬ್ಯಾಂಕ್ ರಜಾ ದಿನಗಳ ಬಗ್ಗೆ ಹೇಳುವುದಾದ್ರೆ ಭಾನುವಾರ, ಎರಡನೇ ಶನಿವಾರ ಮತ್ತು ಸ್ಥಳೀಯ ರಜಾದಿನಗಳು ಸೇರಿದಂತೆ ಸುಮಾರು 15 ದಿನ ಬ್ಯಾಂಕ್ ಮುಚ್ಚಲಿದೆ. ಈ ತಿಂಗಳು ಬ್ಯಾಂಕ್ ಕೆಲಸಗಳನ್ನು ಮಾಡುವವರಿದ್ದರೆ ಮೊದಲೇ ರಜಾ ಪಟ್ಟಿಯನ್ನೊಮ್ಮೆ ಪರಿಶೀಲಿಸಿ.
ಗಾಂಧಿ ಜಯಂತಿ ಅಕ್ಟೋಬರ್ 2ರಂದು ಬ್ಯಾಂಕ್ ಮುಚ್ಚಿರಲಿದೆ. ದುರ್ಗಾ ಪೂಜೆ, ಮಹಸ್ಪ್ತಮಿ, ಮಹಾನವಮಿ, ದಸರಾ, ಮಿಲಾದ್-ಎ-ಷರೀಫ್, ಈದ್-ಎ-ಮಿಲಾದ್-ಉಲ್-ನಬಿ ಬರಾವಾಫತ್, ಲಕ್ಷ್ಮಿ ಪೂಜಾ, ಸರ್ದಾರ್ ವಲ್ಲಭಭಾಯಿ ಪಟೇಲ್ ಜಯಂತಿ, ಮಹರ್ಷಿ ವಾಲ್ಮೀಕಿ ಜಯಂತಿ ಸೇರಿದಂತೆ ಅನೇಕ ಹಬ್ಬಗಳ ಕಾರಣ ಬ್ಯಾಂಕ್ ರಜೆಯಿರಲಿದೆ.
ಅಕ್ಟೋಬರ್ 2, ಗಾಂಧಿ ಜಯಂತಿ. ಅಕ್ಟೋಬರ್ 4 ಭಾನುವಾರ. ಅಕ್ಟೋಬರ್ 10 ಎರಡನೇ ಶನಿವಾರ. ಅಕ್ಟೋಬರ್ 11 ಭಾನುವಾರ. ಅಕ್ಟೋಬರ್ 17ರಂದು ಕತಿ ಬಿಹು. ಅಕ್ಟೋಬರ್ 18 ಭಾನುವಾರ. ಅಕ್ಟೋಬರ್ 23ರಂದು ದುರ್ಗಾಪೂಜೆ, ಅಕ್ಟೋಬರ್ 24ರಂದು ಮಹಾನವಮಿ, ಅಕ್ಟೋಬರ್ 25 ಭಾನುವಾರ. ಅಕ್ಟೋಬರ್ 26 ವಿಜಯದಶಮಿ, ಅಕ್ಟೋಬರ್ 29 ಮಿಲಾದ್-ಎ-ಶೆರಿಫ್, ಅಕ್ಟೋಬರ್ 30 ಈದ್-ಎ-ಮಿಲಾದ್, ಅಕ್ಟೋಬರ್ 31 ಶನಿವಾರ, ಮಹರ್ಷಿ ವಾಲ್ಮೀಕಿ ಮತ್ತು ಸರ್ದಾರ್ ಪಟೇಲ್ ಅವರ ಜನ್ಮದಿನ.
ಆರ್‌ಬಿಐ ಮಾರ್ಗಸೂಚಿ ಪ್ರಕಾರ ಸಾರ್ವಜನಿಕ ರಜಾದಿನಗಳಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಕೆಲವು ರಜಾದಿನಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತವೆ.