ನೀವೇನಾದರೂ ಎಸ್‌ಬಿಐ ನಲ್ಲಿ ಸ್ಥಿರ ಠೇವಣಿ ಇಡಬೇಕು ಎಂದುಕೊಂಡಿದ್ದೀರಾ..? ಹಾಗಾದ್ರೆ ಈ ಸ್ಟೋರಿ ನೋಡಲೇಬೇಕು. ಎಸ್‌ಬಿಐ ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರವನ್ನು ಇಳಿಕೆ ಮಾಡಿದೆ. ಹಾಗಾದ್ರೆ ಯಾವುದಕ್ಕೆ ಎಷ್ಟು ಬಡ್ಡಿ ಅನ್ನೋದನ್ನ ನೋಡೋದಾದ್ರೆ,
ಹೌದು, ಒಂದು ವರ್ಷದಿಂದ ಎರಡು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ ಸ್ಥಿರ ಠೇವಣಿ ಹಣಕ್ಕೆ ಬಡ್ಡಿ ದರವನ್ನು ಶೇ.0.20 ರಷ್ಟು ಕಡಿತಗೊಳಿಸಲಾಗಿದೆ. ಈ ಕಡಿತಗೊಳಿಸಿದ ಬಡ್ಡಿದರಗಳು ಸೆಪ್ಟೆಂಬರ್ 10 ರಿಂದ ಜಾರಿಗೆ ತರಲಾಗಿದೆ.
ಈ ಹಿಂದೆ ಐಸಿಐಸಿಐ ಬ್ಯಾಂಕ್, ಎಚ್.ಡಿ.ಎಫ್.ಸಿ. ಬ್ಯಾಂಕ್‌ಗಳು ಕೂಡ ಬಡ್ಡಿದರವನ್ನು ಕಡಿಮೆ ಮಾಡಿದ್ದವು. ಇದೀಗ ಎಸ್‌ಬಿಐ ಕೂಡ ಅದೇ ಹಾದಿ ಹಿಡಿದಿದೆ. ಇನ್ನು ಬಡ್ಡಿ ದರ ಇಳಿಕೆ ಮಾಡುವುದಕ್ಕೆ ಕೊರೊನಾವೂ ಕಾರಣವಾಗಿರಬಹುದು.