alex Certify ಆಭರಣ ಪ್ರಿಯರಿಗೆ ಶಾಕ್ ನೀಡಿದ ʼಚಿನ್ನʼದ ಬೆಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಭರಣ ಪ್ರಿಯರಿಗೆ ಶಾಕ್ ನೀಡಿದ ʼಚಿನ್ನʼದ ಬೆಲೆ

ಚಿನ್ನದ ದರ ಎಷ್ಟೇ ಹೆಚ್ಚಳವಾದರೂ ಮಹಿಳೆಯರು ಮಾತ್ರ ಚಿನ್ನ ಕೊಂಡುಕೊಳ್ಳುತ್ತಲೇ ಇರುತ್ತಾರೆ. ಕೊಂಚ ಇಳಿಕೆ ಕಂಡರೂ ಚಿನ್ನದ ಅಂಗಡಿಗಳಿಗೆ ಮುಗಿ ಬೀಳೋದು ಕಾಮನ್. ಚಿನ್ನದ ದರದಲ್ಲಿ ಇಳಿಕೆ ಕಾಣುತ್ತೆ ಎಂದು ಕನಸು ಕಂಡಿದ್ದ ಮಹಿಳೆಯರಿಗೆ ಚಿನ್ನದ ದರ ಏರಿಕೆ ಕಂಡಿದ್ದು ಶಾಕ್ ನೀಡಿದೆ. ಇಂದು ಚಿನ್ನದ ದರದಲ್ಲಿ ಅಲ್ಪ ಏರಿಕೆ ಕಂಡಿದೆ.

ಹೌದು, ಚಿನ್ನದ ಬೆಲೆ ಇಂದು ಅಲ್ಪ ಏರಿಕೆ ಕಂಡಿದೆ. ಒಂದು ಗ್ರಾಂ ಚಿನ್ನಕ್ಕೆ 4,434 ರೂಪಾಯಿಯಾಗಿದೆ. ಬೆಂಗಳೂರಿನಲ್ಲಿ ಒಂದು ಗ್ರಾಂ ಚಿನ್ನದ ದರ 4,303 ರೂಪಾಯಿ ಇದೆ. 10 ಗ್ರಾಂ ಚಿನ್ನದ ಬೆಲೆ 44,710 ರೂಪಾಯಿ ಇದೆ. ಆದರೆ ಬೆಳ್ಳಿಯ ದರದಲ್ಲಿ ಕೊಂಚ ಇಳಿಕೆ ಕಂಡಿದ್ದು, ಒಂದು ಕೆ.ಜಿ.ಗೆ 42,010 ರೂಪಾಯಿಯಾಗಿದೆ.

ಇನ್ನು ದೆಹಲಿಯಲ್ಲಿ 22 ಕ್ಯಾರಟ್ ಚಿನ್ನದ ದರವು 10 ಗ್ರಾಂಗೆ 44,710 ರೂಪಾಯಿದ್ದು, ಬೆಲೆಯಲ್ಲಿ ಕೊಂಚ ಏರಿಕೆಯಾಗಿದೆ. ಬೆಳ್ಳಿ ದರವು ಒಂದು ಕೆ.ಜಿ.ಗೆ 43,620 ರೂಪಾಯಿ ಇದೆ. ಇನ್ನು ಚಿನ್ನ ಹಾಗೂ ಬೆಳ್ಳಿಯ ದರಗಳ ಏರಿಕೆಯ ಹಾವು – ಏಣಿ ಆಟ ಮುಂದುವರೆದಿದೆ. ದೇಶದಲ್ಲಿ ಹಳದಿ ಲೋಹದ ಬೆಲೆಯಲ್ಲಿ ಏರಿಕೆ ಕಾಣುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...