alex Certify ಆಭರಣ ಪ್ರಿಯರಿಗೆ ಕೊನೆಗೂ ಗುಡ್ ನ್ಯೂಸ್…! ಚಿನ್ನದ ದರದಲ್ಲಿ ಇಳಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಭರಣ ಪ್ರಿಯರಿಗೆ ಕೊನೆಗೂ ಗುಡ್ ನ್ಯೂಸ್…! ಚಿನ್ನದ ದರದಲ್ಲಿ ಇಳಿಕೆ

ಚಿನ್ನದ ದರದಲ್ಲಿ ಪ್ರತಿನಿತ್ಯ ಏರುಪೇರು ಉಂಟಾಗುತ್ತಿರುವುದು ಗೊತ್ತಿರುವ ವಿಚಾರವೇ. ಪ್ರತಿನಿತ್ಯ ಹಾವು ಏಣಿಯ ಆಟ ಮುಂದುವರೆದಿದೆ. ನಿನ್ನೆ ಇದ್ದ ದರ ಇಂದು ಇರುವುದಿಲ್ಲ. ಹೀಗಾಗಿ ಚಿನ್ನ ಖರೀದಿ ಮಾಡುವ ಎಷ್ಟೋ ಮಂದಿ ಹಿಂದೇಟು ಹಾಕುತ್ತಿದ್ದಾರೆ. ಚಿನ್ನದ ಬೆಲೆಯಲ್ಲಿ ಇಳಿಕೆ ಕಾಣುತ್ತೆ ಅಂತ ಅನೇಕ ಮಹಿಳೆಯರು ಕಾದಿರೋದಂತೂ ಸತ್ಯ. ಅಂತವರಿಗೆ ಈ ಸುದ್ದಿ ಖುಷಿ ನೀಡಬಹುದು.

ಹೌದು, ಲಾಕ್ ಡೌನ್ ಆದಾಗಿನಿಂದಲೂ ಚಿ‌ನ್ನದ ದರದಲ್ಲಿ ಹೇಳಿಕೊಳ್ಳುವ ಮಟ್ಟದಲ್ಲಿ ಇಳಿಕೆ ಕಂಡಿರಲಿಲ್ಲ. ಈಗ ಚಿನ್ನದ ದರದಲ್ಲಿ ಕೊಂಚ ಇಳಿಕೆ ಕಂಡಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್​ನ 10 ಗ್ರಾಂ ಚಿನ್ನಕ್ಕೆ 50 ರೂಪಾಯಿ ಇಳಿಕೆ ಕಂಡಿದೆ. ಈ ಮೂಲಕ ಚಿನ್ನದ ಬೆಲೆ 44,200 ರೂಪಾಯಿ ಆಗಿದೆ. ಇನ್ನು, 24 ಕ್ಯಾರೆಟ್​ನ 10 ಗ್ರಾಂ ಚಿನ್ನದ ದರ ಕೂಡ 130 ರೂಪಾಯಿ ಇಳಿಕೆ ಕಂಡಿದ್ದು, 48,220 ರೂಪಾಯಿ ಆಗಿದೆ.

ಇತ್ತ ಬೆಳ್ಳಿಯ ದರದಲ್ಲಿ ಕೊಂಚ ಏರಿಕೆ ಕಂಡಿದೆ. ಕೆಜಿ ಬೆಳ್ಳಿಗೆ 10 ರೂಪಾಯಿ ಏರಿಕೆ ಕಂಡಿದೆ. ಈ ಮೂಲಕ ಬೆಳ್ಳಿ ದರ 50,160 ರೂಪಾಯಿ ಆಗಿದೆ. ಒಟ್ನಲ್ಲಿ ಪ್ರತಿನಿತ್ಯ ಹಲವಾರು ಕಾರಣಗಳಿಂದ ಹಳದಿ ಲೋಹದಲ್ಲಿ ಏರಿಕೆ ಇಳಿಕೆ ಕಾಣುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...