HomeEntertainmentಸೆಪ್ಟೆಂಬರ್ 20ರಂದು ಬಿಡುಗಡೆಗೆ ಸಜ್ಜಾಗಿದೆ 'ಲಂಗೋಟಿ ಮ್ಯಾನ್'

ಸೆಪ್ಟೆಂಬರ್ 20ರಂದು ಬಿಡುಗಡೆಗೆ ಸಜ್ಜಾಗಿದೆ ‘ಲಂಗೋಟಿ ಮ್ಯಾನ್’

ತನ್ನ ಟೀಸರ್ ಮತ್ತು ವಿಭಿನ್ನ ಟೈಟಲ್  ನಿಂದ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದ್ದ, ‘ಲಂಗೋಟಿ ಮ್ಯಾನ್’ ಚಿತ್ರ ಇದೆ ಸೆಪ್ಟೆಂಬರ್ 20 ರಂದು ರಾಜ್ಯಾದ್ಯಂತ ತೆರೆ ಮೇಲೆ ಬರಲಿದೆ. ಈ ಸಿನಿಮಾ ಈಗಾಗಲೇ ಸಾಕಷ್ಟು ಕುತೂಹಲ ಮೂಡಿಸಿದ್ದು, ತೆರೆ ಮೇಲೆ ವೀಕ್ಷಿಸಲು ಕಾತುರದಿಂದ ಕಾಯುತ್ತಿದ್ದಾರೆ.

ಸಂಜೋತಾ ಭಂಡಾರಿ ನಿರ್ದೇಶನದ ಈ ಚಿತ್ರವನ್ನು ತನು ಟಾಕೀಸ್ ಸಂಸ್ಥೆ ನಿರ್ಮಾಣ ಮಾಡಿದ್ದು, ಆಕಾಶ್  ರಾಂಬೊ ಸೇರಿದಂತೆ ಸ್ನೇಹಾ ಖುಷಿ, ಸಂಹಿತಾ ವಿನಯ, ಧೀರೇಂದ್ರ ಎಸ್, ಹುಲಿ ಕಾರ್ತಿಕ್, ಗಿಲ್ಲಿ ನಟ, ಸಾಯಿ ಪವನಕುಮಾರ್ ಎಂ, ಪಾಲ್ಟಿ ಗೋವಿಂದ್, ಮಹಾಲಕ್ಷ್ಮಿ ವಿ ತೆರೆ ಹಂಚಿಕೊಂಡಿದ್ದಾರೆ. ಸುಮೇದ್ ಕೆ ಸಂಗೀತ ಸಂಯೋಜನೆ ನೀಡಿದ್ದು, ಮನು,  ಹಾಗೂ ಸ್ವರಾಜ್ ಪತ್ರಿಮಠ್ ಅವರ ಸಂಕಲನ, ರವಿವರ್ಮ ಛಾಯಾಗ್ರಹಣ, ಐಶ್ವರ್ಯ ರಮೇಶ್ ಮತ್ತು ವರ್ಷ ಅಮರನಾಥ್ ಅವರ ನೃತ್ಯ ನಿರ್ದೇಶನವಿದೆ.

For Latest News Updates, Join Our Whatsapp Community🚩
RELATED ARTICLES

Most Popular