HomeKarnatakaBIG NEWS: ದೇವಸ್ಥಾನದ ಕಟ್ಟೆ ಮೇಲೆ ಮಲಗಿದ್ದ ವ್ಯಕ್ತಿಯನ್ನು ಕೊಚ್ಚಿ ಕೊಲೆಗೈದ ದುಷ್ಕರ್ಮಿಗಳು

BIG NEWS: ದೇವಸ್ಥಾನದ ಕಟ್ಟೆ ಮೇಲೆ ಮಲಗಿದ್ದ ವ್ಯಕ್ತಿಯನ್ನು ಕೊಚ್ಚಿ ಕೊಲೆಗೈದ ದುಷ್ಕರ್ಮಿಗಳು

ಗೋಕಾಕ್: ಕ್ರೂರ ಮನಸ್ಥಿತಿ ಹೊಂದಿದವರಿಗೆ ದೇವಸ್ಥಾನವಾದರೇನು? ನಡುರಸ್ತೆಯಾದರೇನು? ಕೊಲೆ ಮಾಡಿ ದುಷ್ಕೃತ್ಯವೆಸಗುವುದೊಂದೇ ಉದ್ದೇಶ. ಭಜನಾ ಕಾರ್ಯಕ್ರಮವನ್ನು ಮುಗಿಸಿ ದೇವಸ್ಥಾನದ ಕಟ್ಟೆ ಮೇಲೆ ಮಲಗಿದ್ದ ವ್ಯಕ್ತಿಯೊಬ್ಬರನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನಲ್ಲಿ ನಡೆದಿದೆ.

ಮಡ್ಡೆಪ್ಪ ಯಲ್ಲಪ್ಪ ಬಾನಸಿ (47) ಮೃತ ದುರ್ದೈವಿ. ಮಮದಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಬೀರ ಸಿದ್ದೇಶ್ವರ ಗುಡಿಯ ಕಟ್ಟೆಯ ಮೇಲೆ ಮಲಗಿದ್ದ ಮಡ್ಡೆಪ್ಪನನ್ನು ದುಷ್ಕರ್ಮಿಗಳು ಕಬ್ಬು ಕಡಿಯುವ ಕೊಯ್ತಾದಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಕೊಯ್ತಾದಿಂದ ಮಡ್ಡೆಪ್ಪನ ಕುತ್ತಿಗೆ ಹೊಡೆಯಲಾಗಿದ್ದು, ರಕ್ತದ ಮಡುವಲ್ಲಿ ಬಿದ್ದಿದ್ದ ಅವರನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಡ್ಡೆಪ್ಪ ಸಾವನ್ನಪ್ಪಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೊಲದ ವಿಚಾರವಾಗಿ ಮಡ್ಡೆಪ್ಪ ಹಾಗೂ ಬೀರಪ ಸಿದ್ದಪ್ಪ ಸೊನದೋಳಿ ನಡುವೆ ಕಲಹವಿತ್ತು. ಇದೇ ವಿಚಾರವಾಗಿ ಬೀರಪ್ಪ ಸಿದ್ದಪ್ಪನೇ ಮಡ್ಡಪ್ಪನನ್ನು ಹತ್ಯೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.

ಗೋಗಾಕ್ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular