HomeLatest NewsBREAKING: ಲಕ್ಕುಂಡಿಯಲ್ಲಿ ಉತ್ಖನನದ ವೇಳೆ ಮತ್ತೊಂದು ಪುರಾತನ ವಸ್ತು ಪತ್ತೆ: ಲೋಹದ ಗುಂಡು ಪತ್ತೆ

BREAKING: ಲಕ್ಕುಂಡಿಯಲ್ಲಿ ಉತ್ಖನನದ ವೇಳೆ ಮತ್ತೊಂದು ಪುರಾತನ ವಸ್ತು ಪತ್ತೆ: ಲೋಹದ ಗುಂಡು ಪತ್ತೆ

ಗದಗ: ಗದಗ ಜಿಲ್ಲೆಯ ಐತಿಹಾಸಿಕ ಲಕ್ಕುಂಡಿಯಲ್ಲಿ ಜಿಲ್ಲಾಡಳಿತದಿಂದ ಉತ್ಖನನ ಕಾರ್ಯ ಮುಂದುವರೆದಿದ್ದು, ಪ್ರತಿದಿನ ಒಂದಿಲ್ಲೊಂದು ಅಮೂಲ್ಯ ವಸ್ತುಗಳು ಪತ್ತೆಯಾಗುತ್ತಿವೆ. ಇಂದು ಕೂಡ ಮತ್ತೊಂದು ಪುರಾತನ ವಸ್ತು ಪತ್ತೆಯಾಗಿದ್ದು, ಮತ್ತಷ್ಟು ಕುತೂಹಾ ಮೂಡಿಸಿದೆ.

ಲಕ್ಕುಡಿಂಯ ಕೋಟೆ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದ ಬಳಿ ಜಿಲ್ಲಾಡಳಿತ ಉತ್ಖನನ ಕಾರ್ಯ ನಡೆಸುತ್ತಿದ್ದು, ಇಂದು 8ನೇ ದಿನಕ್ಕೆ ಕಾಲಿಟ್ಟಿದೆ. ಈಗಾಗಲೆ ಉತ್ಖನನದ ವೇಳೆ ನಾಲ್ಕು ಬ್ಲಾಕ್ ರೀತಿಯಲ್ಲಿ ಮಣ್ಣು ತೆಗೆಯಲಾಗಿದ್ದು, ಹಲವಾರು ಪುರಾತನ ವಸ್ತುಗಳು, ಶಿವಲಿಂಗ, ನಾಗರಕಲ್ಲು, ಶಿವಲಿಂಗದ ಪೀಠ, ವಿಗ್ರಹ, ದೇವಸ್ಥಾನದಂತ ಕುರುಹು, ನವಶಿಲಾಯುಗದ ಕೈ ಕೊಡಲಿ, ಕೆಂಪು ಮಣಿ, ಟೆರ್ರಾಕೊಟಾದ ಬಿಲ್ಲೆಯಂತಹ ವಸ್ತು, ಪ್ರಾಚ್ಯ ಅವಶೇಷಗಳು ಪತ್ತೆಯಾಗಿವೆ. 8ನೇ ದಿನದ ಉತ್ಖನನದ ವೇಳೆ ಇಂದು ಅತ್ಯಮೂಲ್ಯವಾದ ಲೋಹದ ಗುಂಡು ಸಿಕ್ಕಿದೆ.

ಪತ್ತೆಯಾಗಿರುವ ಲೋಹದ ಗುಂಡು ಅರ್ಧ ಕೆಜಿಯಷ್ಟು ತೂಕವಿದೆ ಎಂದು ಹೇಳಲಾಗುತ್ತಿದೆ. ಲೋಹದ ಗುಂಡನ್ನು ವಶಕ್ಕೆ ಪಡೆದಿರುವ ಅಧಿಕಾರಿಗಳು ಇದು ಯಾವ ಕಾಲದ ವಸ್ತು? ಲೋಹದ ಗುಂಡಿನ ಮೌಲ್ಯ, ಯಾವ ಉದ್ದೇಶಕ್ಕೆ ಉಪಯೋಗಿಸುತ್ತಿದ್ದರು? ಎಂಬಿತ್ಯಾದಿ ನಿಟ್ಟಿನಲ್ಲಿ ಪರಿಸೀಲನೆ ಮಡೆಸಲು ಮುದಾಗಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಲಕ್ಕುಂಡಿಯ ವೀರಭದ್ರೇಶ್ವರ ದೇವಾಲಯದ ಬಳಿ ಉತ್ಖನನ ಕಾರ್ಯ ಮುಂದುವರೆದಿದ್ದು, ಇನ್ನು ಕೆಲವೇ ಆಳ ಮಣ್ಣು ತೆಗೆದರೆ ಇನ್ನಷ್ಟು ಪುರಾತನ ಹಾಗೂ ರಾಜ-ಮಹಾರಾಜರ ಕಾಲದ ಅತ್ಯಮೂಲ್ಯ ವಸ್ತುಗಳು, ನೈಜ ಲಕ್ಕುಂಡಿಯ ವೈಭವ ಪತ್ತೆಯಾಗಬಹುದು ಎಂಬ ನಿರೀಕ್ಷೆ ಹೆಚ್ಚಿದೆ.

ಇನ್ನೊಂದೆಡೆ ಲಕ್ಕುಂಡಿಯಲ್ಲಿ ನಡೆಯುತ್ತಿರುವ ಉತ್ಖನನದ ಸ್ಥಳಕ್ಕೆ ವಿದೇಶಿ ಪ್ರವಾಸಿಗರು ಭೇಟಿ ನೀಡುತ್ತಿದ್ದು, ದಿನದಿಂದ ದಿನಕ್ಕೆ ಪ್ರವಾಸಿಗರ ಸಂಖ್ಯೆಯೂ ಹೆಚ್ಚುತ್ತಿದೆ. ಜಿಲ್ಲಾಡಳಿತ ಉತ್ಖನನದ ಸ್ಥಳ ಹಾಗೂ ಸುತ್ತಮುತ್ತಲೂ ನಿಷೇಧ ವಿಧಿಸಿದ್ದರೂ ಜನರ ಕುತೂಹಲ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಸ್ಥಳಕ್ಕೆ ಭೇಟಿ ನೀಡಿ ಉತ್ಖನನದ ಸ್ಥಳ ವೀಕ್ಷಿಸುತ್ತಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular