HomeKarnatakaಖಾತೆಗೆ ₹1,500, ₹2,000 ಮಾತ್ರ ಏಕೆ? —

ಖಾತೆಗೆ ₹1,500, ₹2,000 ಮಾತ್ರ ಏಕೆ? —

ಬೆಂಗಳೂರು- ಬರ ಸಂಕಷ್ಟದಲ್ಲಿರುವ ರೈತರಿಗೆ ₹5,000 ಪರಿಹಾರ ನೀಡುವುದಾಗಿ ಘೋಷಿಸಿ, ಮೊದಲ ಕಂತಿನಲ್ಲಿ ₹2,500 ಜಮೆ ಮಾಡುವುದಾಗಿ ಹೇಳಿದ್ದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ, ಇದೀಗ ಕೆಲ ರೈತರ ಬ್ಯಾಂಕ್ ಖಾತೆಗಳಿಗೆ ₹1,500, ₹2,000 ಮಾತ್ರ ಜಮೆಯಾಗಿರುವುದೇಕೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ್ ಪ್ರಶ್ನಿಸಿದ್ದಾರೆ.

ರೈತರ ಸಂಕಷ್ಟದ ಸಮಯದಲ್ಲೂ ಪರಿಹಾರದ ಹಣದಲ್ಲಿ ಇಂತಹ ತಾರತಮ್ಯ ಏಕೆ ನಡೆಯುತ್ತಿದೆ? ಸರ್ಕಾರ ಘೋಷಿಸಿದ ಮೊತ್ತವನ್ನೇ ಅನ್ನದಾತರ ಬ್ಯಾಂಕ್ ಖಾತೆಗೆ ತಲುಪಿಸಲು ಸಾಧ್ಯವಾಗದಿರುವುದು ಆಡಳಿತ ವೈಫಲ್ಯವಲ್ಲವೇ ಎಂದು ಅವರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ರೈತರಿಗೆ ಪರಿಹಾರ ಬೇಕೇ ಹೊರತು ಪ್ರಚಾರದ ಭಾಷಣಗಳಲ್ಲ ಎಂದು ಆರ್. ಅಶೋಕ್ ಟೀಕಿಸಿದ್ದಾರೆ. ಸರ್ಕಾರ ಘೋಷಿಸಿರುವ ₹5,000 ಪರಿಹಾರದಲ್ಲಿ ಕಡಿಮೆ ಮೊತ್ತ ಜಮೆಯಾಗಿರುವ ಬಗ್ಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಜ್ಯದ ರೈತರಿಗೆ ಸ್ಪಷ್ಟ ಉತ್ತರ ನೀಡಬೇಕು ಎಂದು ಆಗ್ರಹಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಲ್ಲದೆ, ರೈತರಿಗೆ ಬಾಕಿ ಉಳಿದಿರುವ ಪರಿಹಾರದ ಮೊತ್ತವನ್ನು ಕೂಡಲೇ ಬಿಡುಗಡೆ ಮಾಡಬೇಕು. ಅನ್ನದಾತರನ್ನು ಕೇವಲ ಘೋಷಣೆಗಳ ಮೂಲಕ ವಂಚಿಸುವುದನ್ನು ನಿಲ್ಲಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ರೈತರ ಖಾತೆಗೆ ಘೋಷಿಸಿದ ಸಂಪೂರ್ಣ ಪರಿಹಾರ ತಲುಪಿಸುವಲ್ಲಿ ಸರ್ಕಾರ ವಿಫಲವಾದರೆ, ಕಾಂಗ್ರೆಸ್ ಸರ್ಕಾರದ ಈ ಬೇಜವಾಬ್ದಾರಿತನಕ್ಕೆ ರಾಜ್ಯದ ಜನತೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಆರ್. ಅಶೋಕ್ ಎಚ್ಚರಿಕೆ ನೀಡಿದ್ದಾರೆ

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular