ಬೆಂಗಳೂರು: ಕಾಂಗ್ರೆಸ್ ಸದಸ್ಯರು ರಾಜ್ಯಪಾಲರನ್ನು ಅಡ್ಡಗಟ್ಟಿದ ಪ್ರಕರಣ ವಿಧಾನ ಪರಿಷತ್ ನಲ್ಲಿ ಪ್ರತಿಧ್ವನಿಸಿದ್ದು, ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರನ್ನು ಅಮಾನತುಗೊಸುವಂತೆ ಬಿಜೆಪಿ ಸದಸ್ಯರು ಪಟ್ಟು ಹಿಡಿದ್ದಾರೆ.
ವಿಧಾನಮಂಡಲ ವಿಶೇಷ ಅಧಿವೇಶನದ ಆರಂಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಭಾಷಣ ಓದದದೇ ಸದನಿಂದ ನಿರ್ಗಮಿಸುತ್ತಿದ್ದ ವೇಳೆ ಕಾಂಗ್ರೆಸ್ ಸದಸ್ಯ ಬಿ.ಕೆ.ಹರಿಪ್ರಸಾದ್ ಸೇರಿದಂತೆ ಇತರ ಸದಸ್ಯರು ರಾಜ್ಯಪಾಲರನ್ನು ಅಡ್ಡಗಟ್ಟಿ ತಡೆಯಲು ಯತ್ನಿಸಿದ್ದರು. ಈ ವೇಳೆ ನಡೆದ ನೂಕಾಟ ತಳ್ಳಾಟದ ವೇಳೆ ಬಿ.ಕೆ.ಹರಿಒರಸಾದ್ ಅವರ ಬಟ್ಟೆ ಹರಿದು ಹೋಗಿತ್ತು.
ಇದೇ ವಿಚಾರ ಇಂದು ವಿಧಾನಪರಿಷತ್ ಕಲಾಪದ ವೇಳೆ ಪ್ರಸ್ತಾಪವಾಗಿದೆ. ರಾಜ್ಯಪಾಲರು ಭಾಷಣ ಓದದೇ ಸದನದಿಂದ ನಿರ್ಗಮಿಸಿದ್ದು, ಸಂವಿಧಾನ ಬಾಹಿರ ಅವರನ್ನು ತದೆಯಲು ಮುಂದಾದ ವೇಳೆ ಬಿಜೆಪಿ ಸದಸ್ಯರು ಗೂಂಡಾಗಳಂತೆ ವರ್ತುಸಿ ನನ್ನ ಬಟ್ಟೆ ಹರಿದಿದ್ದಾರೆ ಎಂದು ಬಿ,ಕೆ.ಹರಿಪ್ರಸಾದ್ ಆರೋಪಿಸಿದರು. ಇದಕ್ಕೆ ಪ್ರತ್ಯುತ್ತರ ನೀಡಿದ ವಿಪಕ್ಷ ನಾಯಕ ಆರ್.ಅಶೋಕ್, ರಾಜ್ಯಪಾಲರನ್ನು ಅಡ್ಡಗಟ್ಟಿ ಗೂಂಡಾವರ್ತನೆ ತೋರಿದ್ದು, ಕಾಂಗ್ರೆಸ್ ಸದಸ್ಯರು. ರಾಜ್ಯಪಾಲರನ್ನು ಅಡ್ಡಗಟ್ಟಿದ ಕಾಂಗ್ರೆಸ್ ಸದಸ್ಯರನ್ನು ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಸದಸ್ಯರಿಂದ ಹರಿಪ್ರಸದ ಬಟ್ಟೆ ಹರಿದಿಲ್ಲ. ಅಲ್ಲಿ ಬಿಜೆಪಿ ಸದಸ್ಯರು ಇರಲೇ ಇರಲ್ಲ. ಇದು ನಮ್ಮ ಮೇಲೆ ಮಾಡುತ್ತಿರುವ ಸುಳ್ಳು ಆರೋಪ. ರಾಜ್ಯಪಾಲರನ್ನು ಅಡ್ಡಗಟ್ಟಿದ್ದು ಯಾರು? ಹರಿಪ್ರಸಾದ್ ಬಟ್ಟೆ ಹರಿದಿದ್ದು ಯಾರು ಎಂಬುದು ವಿಡಿಯೋದಲ್ಲಿ ರೆಕಾರ್ಡ್ ಆಗಿದೆ. ವಿಡಿಯೋ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಿ. ರಾಜ್ಯಪಾಲರನ್ನು ಅಡ್ಡಗಟ್ಟಿ ಗೂಂಡಾಗಳನ್ನು ವರ್ತಿಸಿದ ಬಿ.ಕೆ.ಹರಿಪ್ರಸಾದ್ ಅವರನ್ನು ಪರಿಷತ್ ಸದಸ್ಯ ಸ್ಥಾನದಿಂದ ವಜಾಗೊಳಿಸುವಂತೆ ಒತ್ತಾಯಿಸಿದರು. ಇದೇ ವೇಳೆ ಬಿಜೆಪಿಯ ಇತರ ಸದಸ್ಯರು ಧ್ವನಿಗೂಡಿಸಿದ್ದು, ಕಾಂಗ್ರೆಸ್ ಸದಸ್ಯರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ವಿಧಾನ ಪರಿಷತ್ ಕಲಾಪ ಗದ್ದಲ-ಕೋಲಾಹಲಕ್ಕೆ ಸಾಕ್ಷಿಯಾಯಿತು.

