ಆಸ್ಟ್ರೇಲಿಯಾದ ಪ್ರಸಿದ್ಧ ಟೆನ್ನಿಸ್ ಆಟಗಾರ ನಿಕ್ ಕಿರ್ಗಿಯೋಸ್ ನಿಷೇಧಿತ ಕೊಕೇನ್ ಸೇವನೆ ಮಾಡಿ ಸಿಕ್ಕಿಬಿದ್ದಿದ್ದು, ಅವರನ್ನು ಪಂದ್ಯಾವಳಿಗಳಿಂದ ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ. ಪ್ರಸ್ತುತ 31 ವರ್ಷದ ಕಿರ್ಗಿಯೋಸ್, ಸ್ಪೇನ್‌ನ ಮಲ್ಲೋರ್ಕಾದಲ್ಲಿ ನಡೆದ ಪಂದ್ಯಾವಳಿಯ ವೇಳೆ ಉದ್ದೀಪನ ಮದ್ದು ಪರೀಕ್ಷೆಗೆ ಒಳಗಾಗಿದ್ದರು.
ಅಂತರರಾಷ್ಟ್ರೀಯ ಟೆನ್ನಿಸ್ ಸಮಗ್ರತೆ ಸಂಸ್ಥೆ (ಐಟಿಐಎ) ನಡೆಸಿದ ಪರೀಕ್ಷೆಯಲ್ಲಿ ಅವರ ಮಾದರಿಯಲ್ಲಿ ಕೊಕೇನ್ ಅಂಶ ಪತ್ತೆಯಾಗಿದೆ. ಜೂನ್ 22 ರಂದು ಮಲ್ಲೋರ್ಕಾ ಓಪನ್ ಸಮಯದಲ್ಲಿ ಅವರಿಂದ ಸಂಗ್ರಹಿಸಲಾದ ಮಾದರಿಯಲ್ಲಿ ಕೊಕೇನ್ ಮೆಟಬೊಲೈಟ್ ಆಗಿರುವ ‘ಬೆಂಜೊಯಿಲೆಕ್ಗೊನೈನ್’ ಇರುವುದು ದೃಢಪಟ್ಟಿದೆ. ಇದರ ಬೆನ್ನಲ್ಲೇ ಆಗಸ್ಟ್ 4 ರಿಂದ ಜಾರಿಗೆ ಬರುವಂತೆ ಅವರ ವಿರುದ್ಧ ತಾತ್ಕಾಲಿಕ ಅಮಾನತು ಕ್ರಮ ಕೈಗೊಳ್ಳಲಾಗಿದೆ.
ಈ ಕುರಿತು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸ್ಪಷ್ಟನೆ ನೀಡಿರುವ ಕಿರ್ಗಿಯೋಸ್, ತಾವು ನಿಷೇಧಿತ ಮದ್ದು ಪರೀಕ್ಷೆಯಲ್ಲಿ ವಿಫಲರಾಗಿರುವುದನ್ನು ಒಪ್ಪಿಕೊಂಡಿದ್ದಾರೆ. ನಾನು ದೊಡ್ಡ ತಪ್ಪು ಮಾಡಿದ್ದೇನೆ, ಈ ತಪ್ಪಿನ ಸಂಪೂರ್ಣ ಜವಾಬ್ದಾರಿಯನ್ನು ನಾನೇ ಹೊರತ್ತೇನೆ ಎಂದು ಅವರು ತಿಳಿಸಿದ್ದಾರೆ. ಸದ್ಯ ಐಟಿಐಎ ವಿಧಿಸಿರುವ ಅಮಾನತು ಆದೇಶದ ವಿರುದ್ಧ ಅವರು ಇನ್ನೂ ಯಾವುದೇ ಮೇಲ್ಮನವಿ ಸಲ್ಲಿಸಿಲ್ಲ.
“>

