HomeEntertainmentಕ್ಲೈಮ್ಯಾಕ್ಸ್‌ನಲ್ಲಿ ಬಿಗ್ ಟ್ವಿಸ್ಟ್: ಪಾರ್ಟ್ 2 ಸುಳಿವು ಕೊಟ್ಟು ತೆರೆಬಿದ್ದ ಭಾರ್ಗವಿ ಎಲ್‌ಎಲ್‌ಬಿ!

ಕ್ಲೈಮ್ಯಾಕ್ಸ್‌ನಲ್ಲಿ ಬಿಗ್ ಟ್ವಿಸ್ಟ್: ಪಾರ್ಟ್ 2 ಸುಳಿವು ಕೊಟ್ಟು ತೆರೆಬಿದ್ದ ಭಾರ್ಗವಿ ಎಲ್‌ಎಲ್‌ಬಿ!

ಕಲರ್ಸ್ ಕನ್ನಡ ವಾಹಿನಿಯ ಹಿಟ್ ಧಾರಾವಾಹಿಗಳಲ್ಲಿ ಒಂದಾಗಿದ್ದ ಭಾರ್ಗವಿ ಎಲ್‌ಎಲ್‌ಬಿ ತನ್ನ ಯಶಸ್ವಿ 444 ಸಂಚಿಕೆಗಳ ಪ್ರಸಾರವನ್ನು ಪೂರ್ಣಗೊಳಿಸಿ ವೀಕ್ಷಕರಿಗೆ ಗುಡ್‌ಬೈ ಹೇಳಿದೆ. ಸ್ವಪ್ನ ಕೃಷ್ಣ ಅವರ ಸಾರಥ್ಯದಲ್ಲಿ ಮೂಡಿಬಂದಿದ್ದ ಈ ಧಾರಾವಾಹಿ, ಕಾನೂನು ಸಮರ ಮತ್ತು ಸಾಂಸಾರಿಕ ಬಾಂಧವ್ಯಗಳ ಕಥಾಹಂದರದಿಂದಾಗಿ ಕಿರುತೆರೆ ವೀಕ್ಷಕರ ನೆಚ್ಚಿನ ಸೀರಿಯಲ್ ಆಗಿ ಹೊರಹೊಮ್ಮಿತ್ತು.

ಈ ಸೀರಿಯಲ್‌ನಲ್ಲಿ ಮುಖ್ಯ ಪಾತ್ರಧಾರಿಯಾಗಿ ನಟಿಸಿದ್ದ ರಾಧಾ ಭಗವತಿ ಅವರು ಸತ್ಯ ಹಾಗೂ ನ್ಯಾಯಕ್ಕಾಗಿ ಹೋರಾಡುವ ವಕೀಲೆಯಾಗಿ, ತಮ್ಮ ಕಡಕ್ ಸಂಭಾಷಣೆಯ ಮೂಲಕ ಅಪಾರ ಅಭಿಮಾನಿ ಬಳಗವನ್ನು ಸಂಪಾದಿಸಿದ್ದರು. ಅವರ ಜೊತೆಗೆ ಮನೋಜ್ ಕುಮಾರ್, ಕೀರ್ತಿ ಭಾನು, ಅರುಣಾ ಬಾಲರಾಜ್ ಮತ್ತು ಚೈತ್ರಾ ರಾವ್ ತಮ್ಮ ಅಭಿನಯದ ಮೂಲಕ ಗಮನ ಸೆಳೆದಿದ್ದರು. ಮೂಲತಃ ತೆಲುಗಿನ ಗೀತಾ ಎಲ್‌ಎಲ್‌ಬಿ ಧಾರಾವಾಹಿಯ ರಿಮೇಕ್ ಆಗಿದ್ದ ಈ ಕಥೆಯು, 2025 ರ ಮಾರ್ಚ್ 3 ರಂದು ಶುರುವಾಗಿ 2026 ರ ಆಗಸ್ಟ್ 14 ರಂದು ತನ್ನ ಪಯಣವನ್ನು ಕೊನೆಗೊಳಿಸಿದೆ.

ಧಾರಾವಾಹಿಯ ಕೊನೆಯ ಹಂತದಲ್ಲಿ ಮಾವ ಜೆಪಿ ಪಾಟೀಲ್, ಧರ್ಮ ಹಾಗೂ ನ್ಯಾಯದ ಹಾದಿಯಲ್ಲಿ ಸೊಸೆ ಭಾರ್ಗವಿಯ ಜವಾಬ್ದಾರಿ ಇಲ್ಲಿಗೆ ಮುಗಿದಿಲ್ಲ ಎಂದು ಹೇಳುವ ಮೂಲಕ ಕಥೆಗೆ ವಿರಾಮ ನೀಡಿದ್ದಾರೆ. ಮಾವನ ಈ ಮಾತುಗಳನ್ನು ಗಮನಿಸಿದರೆ ಮುಂದಿನ ದಿನಗಳಲ್ಲಿ ಭಾರ್ಗವಿ ಎಲ್‌ಎಲ್‌ಬಿ ಭಾಗ 2 ಪ್ರಸಾರವಾಗುವುದು ಬಹುತೇಕ ಖಚಿತ ಎಂಬ ಮಾತುಗಳು ಕೇಳಿಬರುತ್ತಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವರದಿಗಳ ಪ್ರಕಾರ, ಶೀಘ್ರದಲ್ಲೇ ಪ್ರಸಾರವಾಗಲಿರುವ ಬಿಗ್ ಬಾಸ್ ಕನ್ನಡ ಸೀಸನ್ 13 ಶೋಗೆ ಪ್ರೈಮ್ ಟೈಮ್ ಸ್ಲಾಟ್ ಬಿಟ್ಟುಕೊಡುವ ಉದ್ದೇಶದಿಂದ ಈ ಸೀರಿಯಲ್ ಅನ್ನು ಮುಕ್ತಾಯಗೊಳಿಸಲಾಗಿದೆ. ನೆಚ್ಚಿನ ಸೀರಿಯಲ್ ಕೊನೆಗೊಂಡಿದ್ದರೂ, ಶೀಘ್ರದಲ್ಲೇ ಎರಡನೇ ಭಾಗ ಮೂಡಿಬರಲಿದೆ ಎಂಬ ಆಸೆಯಲ್ಲಿ ವೀಕ್ಷಕರು ಕಾಯುತ್ತಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular