ಮೇಷ ರಾಶಿ: ಕೃಷಿ ಕ್ಷೇತ್ರದಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಶುಭ ಫಲ ಸಿಗುವ ಸಾಧ್ಯತೆ ಇದೆ. ಸಂಗಾತಿಯ ಆರೋಗ್ಯದಲ್ಲಿ ಚೇತರಿಕೆ ಕಂಡುಬರಬಹುದು. ದಿನದ ಅಂತ್ಯದಲ್ಲಿ ಸಂತಸದ ಸುದ್ದಿ ಕೇಳುವ ನಿರೀಕ್ಷೆಯಿದೆ.
ಶುಭಸಂಖ್ಯೆ: 9
ವೃಷಭ ರಾಶಿ: ಬ್ಯಾಂಕಿಂಗ್ ಕ್ಷೇತ್ರದ ಉದ್ಯೋಗಿಗಳಿಗೆ ಆದಾಯದ ವಿಚಾರದಲ್ಲಿ ಅನುಕೂಲವಾಗಬಹುದು. ಬಂಧುಗಳಿಂದ ಹಣಕಾಸಿನ ನೆರವು ಸಿಗುವ ಸಾಧ್ಯತೆ ಇದೆ. ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಯಶಸ್ಸು ದೊರೆಯಬಹುದು.
ಶುಭಸಂಖ್ಯೆ: 1
ಮಿಥುನ ರಾಶಿ: ಪ್ರಯಾಣ ಮಾಡುವಾಗ ಎಚ್ಚರಿಕೆ ವಹಿಸುವುದು ಉತ್ತಮ. ವ್ಯಾಪಾರದಲ್ಲಿ ಹಿತಶತ್ರುಗಳಿಂದ ಸಮಸ್ಯೆಗಳು ಎದುರಾಗಬಹುದು. ಆಹಾರ ಸೇವನೆಯಲ್ಲಿಯೂ ಜಾಗರೂಕತೆ ಅಗತ್ಯ.
ಶುಭಸಂಖ್ಯೆ: 4
ಕಟಕ ರಾಶಿ: ಸರ್ಕಾರಿ ಕೆಲಸಗಳಲ್ಲಿ ನಿರೀಕ್ಷಿತ ಪ್ರಗತಿ ಕಂಡುಬಂದು ಸಂತಸ ಉಂಟಾಗಬಹುದು. ಇಲಾಖಾ ಪರೀಕ್ಷೆಗಳಲ್ಲಿ ಯಶಸ್ಸು ಸಿಗುವ ಸಾಧ್ಯತೆ ಇದೆ. ಆದರೆ ಕಣ್ಣಿನ ಆರೋಗ್ಯದ ಬಗ್ಗೆ ಗಮನ ಹರಿಸುವುದು ಉತ್ತಮ.
ಶುಭಸಂಖ್ಯೆ: 6
ಸಿಂಹ ರಾಶಿ: ವಸ್ತುಗಳ ಖರೀದಿಗೆ ಹೆಚ್ಚು ಹಣ ಖರ್ಚಾಗುವ ಸಾಧ್ಯತೆ ಇದೆ. ಬಂಧುಗಳ ನಡುವೆ ಭಿನ್ನಾಭಿಪ್ರಾಯ ಮೂಡಬಹುದು. ಉದ್ಯೋಗದ ಸ್ಥಳದಲ್ಲಿ ಮಾತನಾಡುವಾಗ ಎಚ್ಚರಿಕೆ ವಹಿಸಿ.
ಶುಭಸಂಖ್ಯೆ: 9
ಕನ್ಯಾ ರಾಶಿ: ತೈಲ ಉತ್ಪನ್ನಗಳ ಮಾರಾಟದಲ್ಲಿ ತೊಡಗಿರುವವರಿಗೆ ಲಾಭವಾಗಬಹುದು. ಸಂಗಾತಿಯ ಆರೋಗ್ಯದಲ್ಲಿ ಏರುಪೇರು ಕಂಡುಬರುವ ಸಾಧ್ಯತೆ ಇದೆ. ಸಹೋದರರ ನಡುವೆ ಆಸ್ತಿ ವಿಚಾರವಾಗಿ ಚರ್ಚೆ ನಡೆಯಬಹುದು.
ಶುಭಸಂಖ್ಯೆ: 2
ತುಲಾ ರಾಶಿ: ದಾಂಪತ್ಯ ಜೀವನದಲ್ಲಿ ಕೆಲವು ಬದಲಾವಣೆಗಳು ಎದುರಾಗಬಹುದು. ಸಾಕುಪ್ರಾಣಿಗಳಿಂದ ಸಣ್ಣಪುಟ್ಟ ತೊಂದರೆ ಉಂಟಾಗುವ ಸಾಧ್ಯತೆ ಇದೆ. ಮಹಿಳೆಯರು ನಡೆಸುವ ವ್ಯಾಪಾರದಲ್ಲಿ ನಿರೀಕ್ಷಿತ ಲಾಭ ಸಿಗಬಹುದು.
ಶುಭಸಂಖ್ಯೆ: 8
ವೃಶ್ಚಿಕ ರಾಶಿ: ಕಸೂತಿ ವಸ್ತುಗಳ ವ್ಯಾಪಾರಿಗಳಿಗೆ ದಿನವು ಅನುಕೂಲಕರವಾಗಿರಬಹುದು. ಕುಟುಂಬದಲ್ಲಿ ಅನಗತ್ಯ ವಾದ-ವಿವಾದಗಳಿಗೆ ಅವಕಾಶ ನೀಡದಿರುವುದು ಉತ್ತಮ. ಸಾಂಪ್ರದಾಯಿಕ ಚಿಕಿತ್ಸಾ ವಿಧಾನಗಳತ್ತ ಆಸಕ್ತಿ ಹೆಚ್ಚಾಗಬಹುದು.
ಶುಭಸಂಖ್ಯೆ: 1
ಧನು ರಾಶಿ: ನ್ಯಾಯಾಲಯದ ಪ್ರಕರಣಗಳಲ್ಲಿ ಅನುಕೂಲಕರ ಫಲಿತಾಂಶ ಸಿಕ್ಕರೆ ನೆಮ್ಮದಿ ದೊರೆಯಬಹುದು. ಹಣಕಾಸಿನ ವಿಚಾರದಲ್ಲಿ ಒತ್ತಡ ಎದುರಾಗುವ ಸಾಧ್ಯತೆ ಇದೆ. ನೇರವಾಗಿ ಮಾತನಾಡುವಾಗ ಇತರರೊಂದಿಗೆ ಭಿನ್ನಾಭಿಪ್ರಾಯ ಉಂಟಾಗದಂತೆ ಎಚ್ಚರಿಕೆ ವಹಿಸಿ.
ಶುಭಸಂಖ್ಯೆ: 6
ಮಕರ ರಾಶಿ: ಹತ್ತಿ ಬೆಳೆಗಾರರಿಗೆ ಬೇಡಿಕೆ ಹೆಚ್ಚಾಗುವ ಸಾಧ್ಯತೆ ಇದೆ. ಮನೆ ನಿರ್ಮಾಣಕ್ಕೆ ಸಂಬಂಧಿಸಿದ ಕೆಲಸಗಳಲ್ಲಿ ಪ್ರಗತಿ ಕಂಡುಬರಬಹುದು. ಬಹುಕಾಲದಿಂದ ವಿವಾಹಕ್ಕಾಗಿ ಕಾಯುತ್ತಿರುವವರಿಗೆ ಶುಭ ಮಾತುಕತೆ ನಡೆಯುವ ನಿರೀಕ್ಷೆಯಿದೆ.
ಶುಭಸಂಖ್ಯೆ: 4
ಕುಂಭ ರಾಶಿ: ಹೂಡಿಕೆಗಳಿಂದ ಲಾಭವಾಗುವ ಸಾಧ್ಯತೆ ಇದೆ. ಪಾಲುದಾರಿಕೆಯ ವ್ಯವಹಾರದಲ್ಲಿ ಉಂಟಾಗುವ ಉದ್ವಿಗ್ನತೆಯನ್ನು ಕಡಿಮೆ ಮಾಡಿಕೊಳ್ಳುವುದು ಉತ್ತಮ. ತೈಲ ಮಾರಾಟ ಕ್ಷೇತ್ರದಲ್ಲಿರುವವರಿಗೆ ಆದಾಯದ ಅವಕಾಶಗಳು ದೊರೆಯಬಹುದು.
ಶುಭಸಂಖ್ಯೆ: 3
ಮೀನ ರಾಶಿ: ಕಬ್ಬಿಣದ ವಸ್ತುಗಳ ವ್ಯಾಪಾರಿಗಳಿಗೆ ಲಾಭವಾಗಬಹುದು. ಔಷಧ ತಯಾರಿಕಾ ಉದ್ಯಮದಲ್ಲಿರುವವರಿಗೆ ಆದಾಯದ ವಿಚಾರದಲ್ಲಿ ಅನುಕೂಲವಾಗುವ ಸಾಧ್ಯತೆ ಇದೆ. ಮಹಿಳೆಯರು ಮಾತನಾಡುವಾಗ ಸಂಯಮ ಕಾಪಾಡಿಕೊಳ್ಳುವುದು ಉತ್ತಮ.
ಶುಭಸಂಖ್ಯೆ: 3
ಇಂದಿನ ಶುಭಾಶುಭ ಸಮಯ
ರಾಹುಕಾಲ: ಬೆಳಿಗ್ಗೆ 9:08ರಿಂದ 10:36ರವರೆಗೆ
ಯಮಗಂಡ ಕಾಲ: ಮಧ್ಯಾಹ್ನ 1:32ರಿಂದ 2:59ರವರೆಗೆ
ಗುಳಿಕ ಕಾಲ: ಬೆಳಿಗ್ಗೆ 6:12ರಿಂದ 7:40ರವರೆಗೆ
ಸೂರ್ಯೋದಯ: ಬೆಳಿಗ್ಗೆ 6:12
ಸೂರ್ಯಾಸ್ತ: ಸಂಜೆ 5:55

