HomeKarnatakaಕೆಪಿಎಸ್‌ಸಿ ಅಕ್ರಮ ಬಗೆದಷ್ಟು ಬಯಲಾಗುತ್ತಿವೆ ಸ್ಫೋಟಕ ಮಾಹಿತಿ: ಹಗರಣದ ಹಣದಿಂದ ದುಬೈನಲ್ಲಿ ಉದ್ಯಮ ಆರಂಭಿಸಿದ್ದ ಕಿಂಗ್...

ಕೆಪಿಎಸ್‌ಸಿ ಅಕ್ರಮ ಬಗೆದಷ್ಟು ಬಯಲಾಗುತ್ತಿವೆ ಸ್ಫೋಟಕ ಮಾಹಿತಿ: ಹಗರಣದ ಹಣದಿಂದ ದುಬೈನಲ್ಲಿ ಉದ್ಯಮ ಆರಂಭಿಸಿದ್ದ ಕಿಂಗ್ ಪಿನ್; 100 ಕೋಟಿ ಒಡೆಯನಾಗಿದ್ದ ಕನ್ನಾಳೆ

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಪಶುವೈದ್ಯಾಧಿಕಾರಿಗಳ ನೇಮಕಾತಿ ಅಕ್ರಮದ ಬಗ್ಗೆ ಸಿಐಡಿ ತನಿಖೆ ಚುರುಕುಗೊಂಡಿದೆ. ಅಕ್ರಮದ ಬಗ್ಗೆ ಬಗೆದಷ್ಟೂ ಸ್ಫೋಟಕ ಮಾಹಿತಿಗಳು ಲಭ್ಯವಾಗುತ್ತಿವೆ.

ಪ್ರಕರಣದ ಕಿಂಗ್ ಪಿನ್ ಬಸವರಾಜ ಕನ್ನಾಳೆ , ಅಕ್ರಮದ ಮೂಲಕವೇ ಹಣ ಸಂಪಾದಿಸಿ ಹೀಗೆ ಬಂದ ಹಣದಿಂದ ದುಬೈನಲ್ಲಿ ಉದ್ಯಮ ಆರಂಭಿಸಿದ್ದಾನೆ ಎಂದು ತಿಳಿದಿಬಂದಿದೆ. ಕೆಪಿಎಸ್ ಸಿ ಪರೀಕ್ಷಾ ನಿಯಂತ್ರಕನಾಗಿದ್ದ ಜ್ಞಾನೇಂದ್ರ ಕುಮಾರ್‌ ಗಂಗ್ವಾರ್‌ ಸ್ನೇಹ ಸಂಪಾದಿಸಿ ನೇಮಕಾತಿ ಅಕ್ರಮವನ್ನು ಉದ್ಯೋಗವನ್ನಾಗಿ ಮಾಡಿಕೊಂಡಿದ್ದ ಕನ್ನಳೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಎರಡು ವರ್ಷಗಳಲ್ಲಿ ಅಕ್ರಮದ ಮೂಲಕವೇ ಭಾರಿ ಹಣ ಪಡೆದ ಕನ್ನಾಳೆ, ಪ್ರತಿ ನೇಮಕಾತಿಯಲ್ಲಿಯೂ ತನ್ನ ಅಭ್ಯರ್ಥಿಗಳು ಉದ್ಯೋಗ ಪಡೆಯುವಂತೆ ನೋಡಿಕೊಂಡಿದ್ದಾನೆ. ಇದಕ್ಕೆ ಪ್ರತಿಯಾಗಿ ಕೋಟಿ ಕೋಟಿ ರೂ. ಜೇಬಿಗಿಳಿಸಿದ್ದಾನೆ. ಈ ಹಣದಲ್ಲಿ ದುಬೈನಲ್ಲಿ ಹೋಟೆಲ್‌ ಸೇರಿದಂತೆ ಇತರ ಉದ್ಯಮಗಳಲ್ಲಿ ಹೂಡಿಕೆ ಮಾಡಿದ್ದು, ಕೇವಲ ಆರು ವರ್ಷಗಳಲ್ಲಿ ನೂರು ಕೋಟಿ ಒಡೆಯನಾಗಿದ್ದಾನೆ ಎನ್ನಲಾಗಿದೆ.

ಐಎಎಸ್‌ ಅಧಿಕಾರಿ ಜ್ಞಾನೇಂದ್ರರನ್ನು ಬಳಸಿಕೊಂಡು ಕೇವಲ ಆರು ವರ್ಷಗಳ ಅವಧಿಯಲ್ಲಿ ಅಂದಾಜು 100 ಕೋಟಿ ರೂ. ಒಡೆಯನಾಗಿರುವ ಕನ್ನಾಳೆಯ ವ್ಯವಹಾರ ನೋಡಿ ತನಿಖಾಧಿಕಾರಿಗಳೇ ದಂಗಾಗಿದ್ದಾರೆ.

ರಾಜಾನುಕುಂಟೆ ವ್ಯಾಪ್ತಿಯ ಸಿಂಗನಾಯಕನಹಳ್ಳಿ ಸಮೀಪದ ಬಾಳೆಕಾಯಿ ಮಂಡಿಯಲ್ಲಿ ತನ್ನ ಸೋದರ ಸಂಬಂಧಿ ಜತೆ ಬಸವರಾಜ ಕನ್ನಾಳೆಯು 2020ರ ಕೊರೊನಾ ಸಮಯದಲ್ಲಿ ರೈಟರ್‌ ಆಗಿದ್ದ. ಕೇವಲ 20 ಸಾವಿರ ರೂ. ಆಸುಪಾಸು ಸಂಬಳ ಪಡೆಯುತ್ತಿದ್ದ. ಆದರೆ, ಕೊರೊನಾ ಮುಗಿದ ಬಳಿಕ ಬಿಜೆಪಿಯ ಪ್ರಭಾವಿ ರಾಜಕಾರಣಿ ಸ್ನೇಹ ಬೆಳೆಸಿಕೊಂಡ ಕನ್ನಾಳೆ ಮತ್ತೆ ಹಿಂದಿರುಗಿ ನೋಡಿಲ್ಲ. ಜತೆಗೆ, ಹಳೆಯ ಗೆಳೆಯನಾದ ಜ್ಞಾನೇಂದ್ರ, 2024ರ ಫೆಬ್ರವರಿಯಲ್ಲಿ ಕೆಪಿಎಸ್ಸಿ ಪರೀಕ್ಷಾ ನಿಯಂತ್ರಕ ಜವಾಬ್ದಾರಿ ಹೊರುತ್ತಿದ್ದಂತೆ ಅದೃಷ್ಟ ಕುಲಾಯಿಸಿತು ಎಂದುಕೊಂಡಿದ್ದ.

ಎರಡು ವರ್ಷಗಳ ಅವಧಿಯಲ್ಲಿ ಕೆಪಿಎಸ್ಸಿಯಲ್ಲಿ ನಡೆದ ಪ್ರತಿ ನೇಮಕಾತಿಯಲ್ಲಿಯೂ ಜ್ಞಾನೇಂದ್ರ ಸಹಕಾರದಿಂದ ಕೆಲವು ಅಭ್ಯರ್ಥಿಗಳಿಗೆ ಹುದ್ದೆ ಕೊಡಿಸಿದ್ದಾನೆ. ಇದಕ್ಕೆ ಪೂರಕವಾಗಿ ಪ್ರೊಬೇಷನರಿ ಡಿವೈಎಸ್ಪಿಗಳ ಜತೆಗಿನ ಫೋಟೋಗಳು ಮತ್ತಷ್ಟು ಪುಷ್ಟಿ ನೀಡಿವೆ. ಈ ಅಕ್ರಮ ನೇಮಕಾತಿ ವ್ಯವಹಾರದಲ್ಲಿ ಸಿಕ್ಕ ಹಣವನ್ನು ರಿಯಲ್‌ ಎಸ್ಟೇಟ್‌ನಲ್ಲಿ ತೊಡಗಿಸಿದ್ದಾನೆ. ಟ್ರಾವೆಲ್ಸ್‌ ಕಂಪನಿ ತೆರೆದಿದ್ದಾನೆ. ಬಡ್ಡಿ ವ್ಯವಹಾರ ನಡೆಸುತ್ತಿದ್ದ. ದುಬೈನಲ್ಲಿ ಉದ್ಯಮ ಆರಂಭಕ್ಕೂ ಮುನ್ನುಡಿ ಬರೆದಿದ್ದ ಎಂದು ಮೂಲಗಳು ತಿಳಿಸಿವೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular