ಬೆಂಗಳೂರು : ರಾಜ್ಯದ ಸಾವಿರಾರು ವಿದ್ಯಾರ್ಥಿಗಳು ಕಾತರದಿಂದ ಕಾಯುತ್ತಿದ್ದ UGCET-2026 ಫಲಿತಾಂಶ ಪ್ರಕಟವಾಗಿದ್ದು, ಆದರೆ ತಾಂತ್ರಿಕ ಕಾರಣಗಳಿಂದಾಗಿ ಫಲಿತಾಂಶ ವೀಕ್ಷಿಸಲು ವಿದ್ಯಾರ್ಥಿಗಳು ಪರದಾಡುವಂತಾಗಿದೆ.
ಕೆಇಎ (KEA) ಅಧಿಕೃತ ವೆಬ್ಸೈಟ್ನಲ್ಲಿ ತೀವ್ರ ದಟ್ಟಣೆ (Heavy Traffic) ಉಂಟಾಗಿರುವುದರಿಂದ ಸರ್ವರ್ ಸಂಪರ್ಕ ಕಡಿತಗೊಂಡಿದೆ. ಈ ಹಿನ್ನೆಲೆಯಲ್ಲಿ, ವಿದ್ಯಾರ್ಥಿಗಳು ಪದೇ ಪದೇ ವೆಬ್ಸೈಟ್ ಲಾಗಿನ್ ಮಾಡಲು ಯತ್ನಿಸಿ ಸರ್ವರ್ ಮೇಲೆ ಒತ್ತಡ ಹೇರಬಾರದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸೂಚಿಸಿದೆ. ಅಭ್ಯರ್ಥಿಗಳು ಆತಂಕಪಡುವ ಅಗತ್ಯವಿಲ್ಲದಿದ್ದು, ಫಲಿತಾಂಶದ ವಿವರಗಳನ್ನು ನೇರವಾಗಿ ಅಭ್ಯರ್ಥಿಗಳ ನೋಂದಾಯಿತ ವಾಟ್ಸಾಪ್ (WhatsApp) ಸಂಖ್ಯೆಗೆ ಕಳುಹಿಸಲಾಗುವುದು ಎಂದು ತಿಳಿಸಿದೆ.
ವೆಬ್ಸೈಟ್ನಲ್ಲಿ ಹೆಚ್ಚಿನ ದಟ್ಟಣೆ (Heavy Traffic) ಇರುವುದರಿಂದ, KEA ಸರ್ವರ್ ತಾಂತ್ರಿಕ ತೊಂದರೆಗಳನ್ನು ಎದುರಿಸುತ್ತಿದೆ. ಈ ಕಾರಣಕ್ಕಾಗಿ, ಮುಂದಿನ ಕೆಲವು ಗಂಟೆಗಳ ಕಾಲ ಅಭ್ಯರ್ಥಿಗಳು ಪದೇ ಪದೇ ವೆಬ್ಸೈಟ್ ಅನ್ನು ಪ್ರವೇಶಿಸಲು ಪ್ರಯತ್ನಿಸದಂತೆ ಸೂಚಿಸಲಾಗಿದೆ.ನಿಮ್ಮ ಫಲಿತಾಂಶದ ವಿವರಗಳನ್ನು KEA ಸಂಸ್ಥೆಯು ಪ್ರತ್ಯೇಕವಾಗಿ WhatsApp ಮೂಲಕ ಅಭ್ಯರ್ಥಿಗಳಿಗೆ ಕಳುಹಿಸಲಿದೆ. ದಯವಿಟ್ಟು ತಾಳ್ಮೆಯಿಂದಿರಿ.
ಅಭ್ಯರ್ಥಿಗಳಿಗೆ ಸಲಹೆಗಳು
* ವೆಬ್ಸೈಟ್ನಲ್ಲಿ ದಟ್ಟಣೆ ಇರುವುದರಿಂದ ಪದೇ ಪದೇ ಲಾಗಿನ್ ಮಾಡಲು ಪ್ರಯತ್ನಿಸಬೇಡಿ. ಇದು ಸರ್ವರ್ ಮೇಲಿನ ಒತ್ತಡವನ್ನು ಹೆಚ್ಚಿಸುತ್ತದೆ.
* ಅಧಿಕೃತ ಮೂಲಗಳನ್ನು ಗಮನಿಸಿ: KEA ಕಳುಹಿಸುವ WhatsApp ಸಂದೇಶಕ್ಕಾಗಿ ಕಾಯಿರಿ.ನಿಮ್ಮ ಫಲಿತಾಂಶವು ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ನೇರವಾಗಿ ತಲುಪಲಿದೆ.

