HomeKarnatakaಕಡ್ಡಾಯ ಗ್ರಾಮೀಣ ಸೇವೆಯಿಂದ ತಪ್ಪಿಸಿಕೊಂದ ವೈದ್ಯ ವಿದ್ಯಾರ್ಥಿಗಳಿಗೆ ಬಿಗ್ ಶಾಕ್: 15 ಲಕ್ಷ ದಂಡ ಕಟ್ಟುವಂತೆ...

ಕಡ್ಡಾಯ ಗ್ರಾಮೀಣ ಸೇವೆಯಿಂದ ತಪ್ಪಿಸಿಕೊಂದ ವೈದ್ಯ ವಿದ್ಯಾರ್ಥಿಗಳಿಗೆ ಬಿಗ್ ಶಾಕ್: 15 ಲಕ್ಷ ದಂಡ ಕಟ್ಟುವಂತೆ ನೋಟಿಸ್ ಜಾರಿ

ಬೆಂಗಳೂರು: ಕಡ್ಡಾಯ ಒಂದು ವರ್ಷ ಗ್ರಾಮೀಣ ಸೇವೆಗೆ ಹಾಜರಾಗದ 400ಕ್ಕೂ ಹೆಚ್ಚು ವೈದ್ಯ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಶಾಕ್ ನೀಡಿದೆ. ತಲಾ 15 ಲಕ್ಷ ರೂ ದಂಡ ಕಟ್ಟುವಂತೆ ನೋಟಿಸ್ ನೀಡಿದೆ.

ಸರ್ಕಾರಿ ಕೋಟಾದ ಅಡಿಯಲ್ಲಿ ಸರ್ಕಾರಿ ಕಾಲೇಜ್ ಅಥವಾ ಖಾಸಗಿ ಕಾಲೇಜ್​​ಗಳಲ್ಲಿ ಪ್ರವೇಶ ಪಡೆದ ಎಂಬಿಬಿಎಸ್​​​ ವಿದ್ಯಾರ್ಥಿಗಳು ಕಡ್ಡಾಯವಾಗಿ ಒಂದು ವರ್ಷ ಗ್ರಾಮೀಣ ಸೇವೆ ಸಲ್ಲಿಸಬೇಕು ಎಂಬ ನಿಯಮ ಜಾರಿಯಲ್ಲಿದೆ. ಆದರೆ ಹಲವು ವಿದ್ಯಾಅರ್ಥಿಗಳು ಈ ನಿಯಮ ಪಾಲಿಸದೇ ತಪ್ಪಿಸಿಕೊಂಡಿದ್ದಾರೆ. ಅಂತಹ ವಿದ್ಯಾಅರ್ಥಿಗಳಿಗೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.

ಗ್ರಾಮೀಣ ಸೇವೆಯಿಂದ ತಪ್ಪಿಸಿಕೊಂಡ 400ಕ್ಕೂ ಹೆಚ್ಚು ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ 15 ಲಕ್ಷ ರೂ ದಂಡದ ನೋಟಿಸ್​ ನೀಡಿದೆ. ಈ ನೋಟಿಸ್‌ಗೆ 30 ದಿನಗಳೊಳಗೆ ಪ್ರತಿಕ್ರಿಯಿಸದಿದ್ದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ತಿಳಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

2025ರಲ್ಲಿ ಪದವಿ ಪಡೆಯುತ್ತಿರುವ 8,171 ಅಭ್ಯರ್ಥಿಗಳ ಮೆರಿಟ್ ಪಟ್ಟಿಯನ್ನು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಕಳುಹಿಸಿದೆ. ಈ ಪೈಕಿ ಕಡ್ಡಾಯ ಗ್ರಾಮೀಣ ಸೇವೆಗೆ 1,772 ಹುದ್ದೆಗಳು ಲಭ್ಯವಾಗಿವೆ. ಎಲ್ಲಾ ಹುದ್ದೆಗಳನ್ನು ಆನ್‌ಲೈನ್​​​ ಕೌನ್ಸಿಲಿಂಗ್​ ಮೂಲಕ ಭರ್ತಿ ಮಾಡಲಾಗಿದೆ. 6,119 ಹೆಚ್ಚುವರಿ ಅಭ್ಯರ್ಥಿಗಳಿಗೆ ಕಡ್ಡಾಯ ಸೇವೆಯಿಂದ ವಿನಾಯಿತಿ ನೀಡಲಾಗಿದೆ. ಕೌನ್ಸಿಲಿಂಗ್ ವೇಳೆ ಲಾಗಿನ್​ ಮಾಡದ ಅಥವಾ ಸ್ಥಳ ಆಯ್ಕೆ ಮಾಡದ ಹಾಗೂ ಸೇವೆಗೆ ಹಾಜರಾಗದ 208 ಅಭ್ಯರ್ಥಿಗಳಿಗೆ ನೋಟಿಸ್​​ ಜಾರಿ ಮಾಡಲಾಗಿದೆ. ನಿಯಮಗಳ ಪ್ರಕಾರ ಗ್ರಾಮೀಣ ಸೇವೆ ಕೈಬಿಟ್ಟರೆ 15 ಲಕ್ಷ ರೂ ದಂಡ ಸರ್ಕಾರಕ್ಕೆ ಪಾವತಿಸಬೇಕು.

ಸರ್ಕಾರಿ ವೈದ್ಯಕೀಯ ಕೋಟಾದಡಿ ಎಂಬಿಬಿಎಸ್ ಪದವಿ ಪಡೆದ ವಿದ್ಯಾರ್ಥಿಗಳಿಗೆ ಗ್ರಾಮೀಣ ಸೇವೆ ಕಡ್ಡಾಯವಾಗಿದೆ. ಕಾಯ್ದೆಗಳ ಪ್ರಕಾರ, ಇಂತಹ ಅಭ್ಯರ್ಥಿಗಳು ಕನಿಷ್ಠ ಒಂದು ವರ್ಷ ಗ್ರಾಮೀಣ ಪ್ರದೇಶಗಳ ಆರೋಗ್ಯ ಕೇಂದ್ರಗಳಲ್ಲಿ ವೈದ್ಯಕೀಯ ಸೇವೆ ಸಲ್ಲಿಸಿದ ನಂತರ ಮಾತ್ರ ಮುಂದಿನ ಹಂತಕ್ಕೆ ಹೋಗಬಹುದು. ಗ್ರಾಮೀಣ ಸೇವೆಯನ್ನು ಪೂರ್ಣಗೊಳಿಸಿದ ಬಳಿಕವೇ ಅವರು ಕರ್ನಾಟಕ ವೈದ್ಯಕೀಯ ಪರಿಷತ್‌ (ಕೆಎಂಸಿ)ನಲ್ಲಿ ನೋಂದಣಿ ಮಾಡಿಸಿಕೊಳ್ಳಲು ಅರ್ಹರಾಗುತ್ತಾರೆ.

ಕೆಎಂಸಿ ನೋಂದಣಿ ಪ್ರಮಾಣಪತ್ರವಿಲ್ಲದೆ ರೋಗಿಗಳಿಗೆ ಚಿಕಿತ್ಸೆ ನೀಡುವುದು, ಖಾಸಗಿ ಆಸ್ಪತ್ರೆಗಳಲ್ಲಿ ಉದ್ಯೋಗ ಮಾಡುವುದು, ಸ್ವಂತ ಕ್ಲಿನಿಕ್ ಅಥವಾ ನರ್ಸಿಂಗ್ ಹೋಂ ಆರಂಭಿಸುವುದು ಹಾಗೂ ವೈದ್ಯಕೀಯ ವೃತ್ತಿಗಾಗಿ ವಿದೇಶಗಳಿಗೆ ತೆರಳಲು ಸಾಧ್ಯವಿಲ್ಲ ಎಂಬ ನಿಯಮವಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular