ಬೆಂಗಳೂರು: ಕರ್ನಾಟಕ ಕೇಡರ್‌ನ 2023 ಮತ್ತು 2024ನೇ ಬ್ಯಾಚ್‌ನ ನಾಲ್ವರು ಪ್ರೊಬೇಷನರಿ ಐಪಿಎಸ್ ಅಧಿಕಾರಿಗಳು ತಮ್ಮ ಎರಡನೇ ಹಂತದ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ರಾಜ್ಯ ಸರ್ಕಾರವು ಅವರಿಗೆ ಮೊದಲ ಪೋಸ್ಟಿಂಗ್ ನೀಡಿ ಆದೇಶ ಹೊರಡಿಸಿದೆ.ನಾಲ್ವರು ಅಧಿಕಾರಿಗಳನ್ನು ರಾಜ್ಯದ ವಿವಿಧ ಉಪವಿಭಾಗಗಳಿಗೆ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿಗಳಾಗಿ (ಎಎಸ್‌ಪಿ) ನೇಮಕ ಮಾಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್) ಅಧಿಸೂಚನೆ ಹೊರಡಿಸಿದೆ.
ಈ ನಾಲ್ಕೂ ಅಧಿಕಾರಿಗಳನ್ನು ರಾಜ್ಯದ ವಿವಿಧ ಉಪವಿಭಾಗಗಳಿಗೆ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿಗಳಾಗಿ (ASP) ನಿಯೋಜಿಸಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (DPAR) ಅಧಿಸೂಚನೆ ಬಿಡುಗಡೆ ಮಾಡಿದೆ ತಕ್ಷಣದಿಂದಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಈ ಅಧಿಕಾರಿಗಳು ಕರ್ತವ್ಯ ನಿರ್ವಹಿಸುವಂತೆ ಸೂಚಿಸಲಾಗಿದೆ. ಕರ್ನಾಟಕ ರಾಜ್ಯಪಾಲರ ಆದೇಶದ ಮೇರೆಗೆ ಡಿಪಿಎಆರ್ ಸರ್ಕಾರದ ಅಧೀನ ಕಾರ್ಯದರ್ಶಿ ಸಂಜಯ್ ಬಿ.ಎಸ್ ಅವರು ಈ ಆದೇಶ ಹೊರಡಿಸಿದ್ದಾರೆ .
ನಿಯೋಜನೆಗೊಂಡ ನೂತನ ASP ಅಧಿಕಾರಿಗಳ ವಿವರ:
ಡಾ. ಭಾನು ಪ್ರಕಾಶ್ ಜೆ.: ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ, ತೀರ್ಥಹಳ್ಳಿ ಉಪವಿಭಾಗ (ಶಿವಮೊಗ್ಗ ಜಿಲ್ಲೆ)
ಇಶಿತಾ ಗುಪ್ತಾ: ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ, ಕಾರ್ಕಳ ಉಪವಿಭಾಗ (ಉಡುಪಿ ಜಿಲ್ಲೆ)
ಅನನ್ಯ ಶ್ರೀವಾಸ್ತವ್: ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ, ಹುಬ್ಬಳ್ಳಿ ಗ್ರಾಮಾಂತರ ಉಪವಿಭಾಗ (ಧಾರವಾಡ ಜಿಲ್ಲೆ)
ರಾನು ಗುಪ್ತಾ: ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ, ಭಟ್ಕಳ ಉಪವಿಭಾಗ (ಉತ್ತರ ಕನ್ನಡ ಜಿಲ್ಲೆ)

