HomeEntertainmentನಾಳೆ ಬಿಡುಗಡೆಯಾಗಲಿದೆ 'ಕಾಲಾಪತ್ಥರ್‌'

ನಾಳೆ ಬಿಡುಗಡೆಯಾಗಲಿದೆ ‘ಕಾಲಾಪತ್ಥರ್‌’

ವಿಕ್ಕಿ ವರುಣ್ ಮತ್ತು ಧನ್ಯ ರಾಮ್ ಕುಮಾರ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ‘ಕಾಲಾಪತ್ಥರ್‌’ ಚಿತ್ರ ನಾಳೆ ರಾಜ್ಯಾದ್ಯಂತ ತೆರೆ ಕಾಣಲಿದೆ. ಈ ಸಿನಿಮಾದ ಎಲ್ಲಾ ಹಾಡುಗಳು ಯೂಟ್ಯೂಬ್ ನಲ್ಲಿ ಸೂಪರ್ ಡೂಪರ್ ಹಿಟ್ ಆಗಿದ್ದು, ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಇತ್ತೀಚಿಗಷ್ಟೇ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್  ಟ್ರೈಲರ್ ರಿಲೀಸ್ ಮಾಡುವ ಮೂಲಕ ಚಿತ್ರ ತಂಡಕ್ಕೆ ಶುಭ  ಹಾರೈಸಿದ್ದರು.

ಈ ಚಿತ್ರವನ್ನು ವಿಕ್ಕಿ ವರುಣ್ ಅವರೇ ನಿರ್ದೇಶಿಸಿ ನಾಯಕನಾಗಿ ಅಭಿನಯಿಸಿದ್ದು, ಧನ್ಯ ರಾಮ್ ಕುಮಾರ್, ನಾಗಾಭರಣ, ಅಚ್ಯುತ್ ಕುಮಾರ್, ಸಂಪತ್, ರಾಜೇಶ್ ನಟರಂಗ, ಗಲ್ಲಿ ನಟ, ಬಸು ಹಿರೇಮಠ, ಕಾಂತರಾಜ್ ಕಡ್ಡಿಪುಡಿ, ಉಳಿದ  ತಾರಾಂಗಣದಲ್ಲಿದ್ದಾರೆ. ಭುವನ್ ಮೂವೀಸ್ ಬ್ಯಾನರ್ ನಲ್ಲಿ ಸುರೇಶ್ – ನಾಗರಾಜು ನಿರ್ಮಾಣ ಮಾಡಿದ್ದು, ಅನೂಪ್ ಸೀಳಿನ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ದೀಪು ಎಸ್ ಕುಮಾರ್ ಸಂಕಲನ, ಸಂದೀಪ್ ಕುಮಾರ್ ಛಾಯಾಗ್ರಾಹಣ, ಹಾಗೂ ವಿಕ್ರಮ್ ಮೋರ್ ಮತ್ತು ಮಾಸ್ ಮಾದ ಅವರ ಸಾಹಸ ನಿರ್ದೇಶನವಿದೆ.

For Latest News Updates, Join Our Whatsapp Community🚩
RELATED ARTICLES

Most Popular